Sunday, June 7, 2026
Homeಕರಾವಳಿಉಡುಪಿಇನ್ನು ಮುಂದೆ ಸೆಲೂನ್‌ಗಳು ಮಂಗಳವಾರದ ಬದಲು ರವಿವಾರ ಬಂದ್

ಇನ್ನು ಮುಂದೆ ಸೆಲೂನ್‌ಗಳು ಮಂಗಳವಾರದ ಬದಲು ರವಿವಾರ ಬಂದ್

- Advertisement -
- Advertisement -

ಉಡುಪಿ, ಮೇ 23: ರಾಜ್ಯ ಸರಕಾರ ರವಿವಾರ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ನ್ನು ಘೋಷಿಸಿರುವುದರಿಂದ ಸೆಲೂನ್‌ಗಳನ್ನೂ ಬಂದ್ ಮಾಡಬೇಕಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಸೆಲೂನ್‌ಗಳನ್ನು ರವಿವಾರ ಬಂದ್ ಮಾಡಿ, ಮಂಗಳವಾರ ತೆರೆದು ಕೆಲಸ ನಿರ್ವಹಿಸಬಹುದು ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ್ ಭಂಡಾರಿ ಗುಡ್ಡೆ ಅಂಗಡಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳವಾರ ಸಲೂನ್ ತೆರೆದು ರವಿವಾರ ಕಡ್ಡಾಯ ರಜೆ ಘೋಷಿಸುವ ಚಿಂತನೆ ಚರ್ಚೆಯಲ್ಲಿದೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!