Saturday, July 18, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಾಪತ್ತೆಯಾಗಿರುವ ವಿಠಲ್ ಗೌಡರ ಬಂಧನಕ್ಕಾಗಿ ಮತ್ತೆ ಪೊಲೀಸರ ಜೊತೆ ಬಂದ ಕೋರ್ಟ್ ಅಮಿನ್

ಬೆಳ್ತಂಗಡಿ : ನಾಪತ್ತೆಯಾಗಿರುವ ವಿಠಲ್ ಗೌಡರ ಬಂಧನಕ್ಕಾಗಿ ಮತ್ತೆ ಪೊಲೀಸರ ಜೊತೆ ಬಂದ ಕೋರ್ಟ್ ಅಮಿನ್

- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ವಿರೇಂದ್ರ ಹೆಗ್ಗಡೆ ಯವರ ಬಗ್ಗೆ ಅವಹೇಳನವಾಗಿ ಮಾತಾಡಿದ ಕು.ಸೌಜನ್ಯ ಮಾವ ವಿಠಲ್ ಗೌಡರಿಗೆ 17-01-2026 ರಂದು ಬೆಂಗಳೂರು ಸೆಷನ್ಸ್ ಕೋರ್ಟ್ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಶಿಕ್ಷೆ ಪ್ರಕಟವಾದ ಬಳಿಕ ಕಳೆದ ಸುಮಾರು ಐದು ತಿಂಗಳಿನಿಂದ ಧರ್ಮಸ್ಥಳ ಪೋಲೀಸರಿಗೂ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ವಿಠಲ್ ಗೌಡರನ್ನು ಬಂಧಿಸಲು ಜೂನ್.26 ರಂದು ಬೆಂಗಳೂರಿನಿಂದ ಕೋರ್ಟ್ ಅಧಿಕಾರಿಗಳು(ಕೋರ್ಟ್ ಅಮಿನ್)  ಧರ್ಮಸ್ಥಳ ಪೊಲೀಸರ ಸಹಕಾರದೊಂದಿಗೆ ಆಗಮಿಸಿ ಹುಡುಕಾಟ ನಡೆಸುತ್ತಿದ್ದಾರೆ.

ವಿಠಲ್ ಗೌಡ ರಾತ್ರಿ ಸಮಯದಲ್ಲಿ ಧರ್ಮಸ್ಥಳ,ಉಜಿರೆ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ಮಾಹಿತಿ ಪಡೆದ ಕೋರ್ಟ್ ಅಧಿಕಾರಿಗಳು ವಿಠಲ್ ಗೌಡರ ಮನೆ,  ಕುಸುಮಾವತಿಯವರ ಮನೆ, ಉಜಿರೆ ಮಹೇಶ್ ತಿಮರೋಡಿ ನಿವಾಸಕ್ಕೆ ಭೇಟಿ ನೀಡಿ ಹುಡುಕಾಟ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!