Saturday, May 18, 2024
Homeಇತರಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ನೆರವು ...!

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ನೆರವು …!

spot_img
- Advertisement -
- Advertisement -

ಬೆಳ್ತಂಗಡಿ: ಕಲಿಯ ಗ್ರಾಮದ ಬಿಳಿಬೈಲು ನಿವಾಸಿ ನವೀನ್ ರಮ್ಯ ದಂಪತಿಗಳ ಮಗುವಾದ ವಿಶಿಕಾಳಿಗೆ ಆಟೋ ಇಮ್ಯೂನ್ ಎನ್ಸ್ ಫಾಲಿಟಿಸ್ ಎನ್ನುವುದು ದೇಹದ ರೋಗನಿರೋಧಕ ವ್ಯವಸ್ಥೆಯ ಹಾಗೂ ಮೆದುಳಿನ ಮೇಲೆ ದಾಳಿ ಮಾಡಿ ಉರಿಯೂತಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆ ಯಾಗಿದ್ದು ಇದರ ಚಿಕಿತ್ಸೆ 2 ವರ್ಷ ‌ಕಾಲ 15 ದಿನಗಳಿಗೊಮ್ಮೆ ಮಾಡಬೇಕಾಗಿ ವೈದರು ತಿಳಿಸಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರು ಮಗುವಿನ ಚಿಕಿತ್ಸೆಗೆ ತುಂಬಾ ಹಣದ ಅಗತ್ಯವಿರುವುದರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡು ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಚಾಲಕರಾದ ರವಿ ಕೇರ್ಯ, ರಾಜೇಶ್ ಉಳಿ, ರಂಜಿತ್ ಉಡ್ಕುಂಜ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀನಿವಾಸ್ ಜಾರಿಗೆ ಕೊಟ್ರಸ್ ಇವರು ಕಕ್ಯಪದವು ಜಂಕ್ಷನ್ ನಲ್ಲಿ ಬಾಕ್ಸ್ ಹಿಡಿದು 15,100 ರೂಪಾಯಿ ಜಮಾ ಮಾಡಿದರು.

ಈ ಹಣವನ್ನು ಕಡಂಬಿಲ್ತಯಿ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹಸ್ತಾಂತರಿಸಲಾಯಿತು ಈ ಸಮಯದಲ್ಲಿ ಪಂಚದುರ್ಗಾ ಜನರಲ್ ಸ್ಟೋರ್ ನಾ ಮಾಲಕ ರಾದ ಚಂದ್ರಶೇಖರ ಕರ್ಬಂಡ್ಕ, ಜನಾರ್ದನ ಪುಳ್ಳೇರಿ, ಯೋಗೀಶ್ ಕರ್ಲ , ಧರ್ಣಪ್ಪ ಉಡ್ಕುಂಜ , ಸುಂದರ ಅಂಚನ್ ರಾಮನಗರ ಇವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!