Friday, June 5, 2026
Homeತಾಜಾ ಸುದ್ದಿಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ:  25 ಲಕ್ಷ ಖರ್ಚು ಮಾಡಿ ರಾಮಮಂದಿರ ನಿರ್ಮಾಣ

ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ವ್ಯಕ್ತಿ:  25 ಲಕ್ಷ ಖರ್ಚು ಮಾಡಿ ರಾಮಮಂದಿರ ನಿರ್ಮಾಣ

- Advertisement -
- Advertisement -

ತೆಲಂಗಾಣ : ಇಲ್ಲಿನ ಖಮ್ಮಂ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಸ್ವಂತ ಖರ್ಚಿನಲ್ಲಿ ರಾಮಮಂದಿರ ನಿರ್ಮಿಸಿ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ರಘುನಾ ಥಪಾಲೆಮ್ ಮಂಡಲದ ಬೂದಿದಂ ಪಾಡುವಿನಲ್ಲಿ ಶೇಖ್ ಮೀರಾಸಾಹೇಬ್ ಅನ್ನೋ ಮುಸ್ಲಿಂ ವ್ಯಕ್ತಿ ತನ್ನ ಸ್ವಂತ ಹಣವನ್ನು ಖರ್ಚು ಮಾಡಿ ಸ್ಥಳೀಯರ ಸಹಾಯದಿಂದ ರಾಮಮಂದಿರವನ್ನು ನಿರ್ಮಿಸಿದ್ದಾರೆ, ಶೇಖ್ ಮೀರಾ ಸಾಹೇಬ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಶೇಖ್ ಮೀರಾಸಾಹೇಬ್ ಸ್ವಂತ ಹಣದಲ್ಲಿ ಗ್ರಾಮದಲ್ಲಿ 25 ಲಕ್ಷ ರೂ.ಗಳ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಸ್ಥಳೀಯರು ಕೂಡ ಅವರಿಗೆ ಸಣ್ಣಪುಟ್ಟ ಸಹಕಾರ ಮಾಡಿದ್ದಾರೆ ಎನ್ನಲಾಗಿದೆ. ಹಿಜಾಬ್, ಅಝಾನ್ ಗದ್ದಲದ ನಡುವೆ ಸಮಾಜದಲ್ಲಿ ಸೌಹಾರ್ದತೆ ಬೆಸೆಯುವ ಕೆಲಸ ಮಾಡಿದ್ದಾರೆ ಮೀರಾ ಸಾಹೇಬ್ ಶೇಖ್.

- Advertisement -

Latest News

error: Content is protected !!