Sunday, May 5, 2024
Homeತಾಜಾ ಸುದ್ದಿಪುತ್ತೂರು: ಬಾರ್‌ ಆ್ಯಂಡ್ ರೆಸ್ಟೋರೆಂಟ್ ಮುಚ್ಚುವಂತೆ ಆಗ್ರಹ: ಸ್ಥಳೀಯರಿಂದ ಅಧಿಕಾರಿಗೆ ದಿಗ್ಬಂಧನ

ಪುತ್ತೂರು: ಬಾರ್‌ ಆ್ಯಂಡ್ ರೆಸ್ಟೋರೆಂಟ್ ಮುಚ್ಚುವಂತೆ ಆಗ್ರಹ: ಸ್ಥಳೀಯರಿಂದ ಅಧಿಕಾರಿಗೆ ದಿಗ್ಬಂಧನ

spot_img
- Advertisement -
- Advertisement -

ಪುತ್ತೂರು: ಕಬಕ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಮುರ ಕೆದಿಲ ಸಡಕ್ ರಸ್ತೆಯ ಮುರದಲ್ಲಿ ನೂತನವಾಗಿ ತೆರೆಯಲಾದ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದು, ಇಂದು ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ್ದ ಅಬಕಾರಿ ಇಲಾಖೆಯ ವಾಹನವನ್ನು ಅಲ್ಲಿಂದ ಕದಡಲು ಬಿಡದೆ ಸ್ಥಳೀಯರು ದಿಗ್ಧಂಧನ ಹಾಕಿದ್ದಾರೆ.

ಈ ವೇಳೆ ಸಾಮಾಜಿಕ ಹೋರಾಟಗಾರ ಸುದರ್ಶನ್ ಮುಂಚೂಣಿಯಲ್ಲಿದ್ದರು. ಮುರ ಜನವಸತಿ ಪ್ರದೇಶದಲ್ಲಿ ಬಾರ್‌ಗೆ ಅನುಮತಿ ಕೊಟ್ಟದು ತಪ್ಪು. ಆರಂಭದಲ್ಲಿ ಇಲ್ಲಿ ಪ್ರೀತಂ ಎನ್ನುವ ಹೊಟೇಲ್ ಆರಂಭಗೊಂಡಿತ್ತು. ಇದೀಗ ಇಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಲಾಗಿದೆ. ಇದಕ್ಕೆ ನಮ್ಮ ಊರವರ ವಿರೋಧವಿದೆ ಎಂದು ಸುದರ್ಶನ್ ಅವರು ಅಬಕಾರಿ ಇನ್‌ಸ್ಪೆಕ್ಟರ್ ಅವರ ಬಳಿ ಹೇಳಿದರು. ಊರವರು ಕೂಡಾ ಇದಕ್ಕೆ ಧ್ವನಿಗೂಡಿಸಿದರು. ಮತ್ತೂಂದೆಡೆ ಕೆಲವರು ನಮಗೆ ಬಾರ್ ಬೇಕು, ಈ ಹಿಂದೆ ಮುರ ಪೇಟೆಯಲ್ಲಿ ಬಾರ್ ಇತ್ತು ಎಂದು ಹೇಳಿಕೊಳ್ಳುತ್ತಿದ್ದರು.

ಅಬಕಾರಿ ಡಿಸಿ ಅನುಮತಿಯಂತೆ ಬಾರ್‌ ತೆರೆಯಲಾಗಿದೆ. ನಾವು ಮೇಲಾಧಿಕಾರಿಗಳ ಸೂಚನೆಯಂತೆ ಪರಿಶೀಲನೆಗೆ ಬಂದಿದ್ದೇವೆ. ನಿಮ್ಮ ಅಭಿಪ್ರಾಯ, ಮನವಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಅಬಕಾರಿ ಇನ್‌ಸ್ಪೆಕ್ಟರ್ ಸುಜಾತಾ ತಿಳಿಸಿದರು. ಊರವರು ಪ್ರತಿಕ್ರಿಯಿಸಿ, ಬಾರ್ ಮುಚ್ಚಬೇಕು. ಇಲ್ಲದಿದ್ದಲ್ಲಿ ನಾವು ಇಲ್ಲಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭ ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದವರನ್ನು ಚದುರಿಸಿದರು.

- Advertisement -
spot_img

Latest News

error: Content is protected !!