Sunday, June 7, 2026
Homeತಾಜಾ ಸುದ್ದಿಕೋಮು ಸಂಘರ್ಷದ ಮಧ್ಯೆ ಸೌಹಾರ್ದತೆಯ ತಂಗಾಳಿ: ಹಿಂದೂ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲೀಂ ಸಹೋದರರು

ಕೋಮು ಸಂಘರ್ಷದ ಮಧ್ಯೆ ಸೌಹಾರ್ದತೆಯ ತಂಗಾಳಿ: ಹಿಂದೂ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲೀಂ ಸಹೋದರರು

- Advertisement -
- Advertisement -

ಮೈಸೂರು ಹಿಜಾಬ್, ಅಜಾನ್ ಗಲಭೆಯ ನಡುವೆ ರಾಜ್ಯದಲ್ಲಿ ಕೋಮು ಸೌಹಾರ್ದತೆಯ ತಂಗಾಳಿ ಬೀಸುವ ಘಟನೆಯೊಂದು ನಡೆದಿದೆ. ಮೈಸೂರಿನಲ್ಲಿ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಯುವಕರು ನಡೆಸಿ ಸೌಹರ್ದತೆ ಮೆರೆದಿದ್ದಾರೆ.

ಮೈಸೂರಿನ ಗೌಸಿಯಾನಗರದ ನಿವಾಸಿ ಜಯಕ್ಕ(60) ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತ ಜಯಕ್ಕನಿಗೆ ಇಬ್ಬರು ಸೊಸೆ ಬಿಟ್ಟರೆ ಬೇರೆ ಯಾರೂ ‌ಇರಲಿಲ್ಲ. ಇದರಿಂದ ನೆರೆಹೊರೆಯ ಮುಸ್ಲಿಂ ಯುವಕರು ಸೇರಿ ಜಯಕ್ಕನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತಿಮ ಕಾರ್ಯ ನೆರವೇರಿಸಲಾಗಿದ್ದು, ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ.

- Advertisement -

Latest News

error: Content is protected !!