Sunday, May 19, 2024
Homeಇತರಮಂಗಳೂರು: ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗು ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ..!

ಮಂಗಳೂರು: ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಹಾಗು ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ..!

spot_img
- Advertisement -
- Advertisement -

ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿದೆ..

  1. ಎಲ್ಲಾ ವಿದ್ಯಾರ್ಥಿಗಳು/ಉದ್ಯೋಗಿಗಳು ಕಡ್ಡಾಯವಾಗಿ 72 ಗಂಟೆಗಳಿಗಿಂತ ಹಳೆಯದಲ್ಲದ ನೆಗೆಟಿವ್‌ ಆರ್‌ಟಿ-ಪಿಸಿಆರ್‌ ಪ್ರಮಾಣ ಪತ್ರಗಳನ್ನು ತಮ್ಮೊಂದಿಗೆ ತರಬೇಕು. ಕೋವಿಡ್ ಲಸಿಕೆ ತೆಗೆದುಕೊಂಡಿರುವುದು ಈ ವಿಷಯದಲ್ಲಿ ಗಣನೆಗೆ ಬರುವುದಿಲ್ಲ. ಪ್ರಮಾಣಪತ್ರದ ವಾಯಿದೆ ಒಂದು ವಾರದ ಮಟ್ಟಿಗೆ ಇರಲಿದೆ.

a. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಯನ್ನು ಆಯಾಯಾ ಶಿಕ್ಷಣ ಸಂಸ್ಥೆಗಳ ಆಡಳಿತಗಳೇ ನೋಡಿಕೊಳ್ಳಬೇಕು.

b. ಉದ್ಯೋಗಿಗಳ ವಿಚಾರದಲ್ಲಿ, ಸಂಬಂಧಪಟ್ಟ ಕಂಪನಿಗಳು ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು.

c. ಯಾವುದೇ ಕಾರಣಕ್ಕೂ ಮನೆಯಲ್ಲಿ ಐಸೋಲೇಟ್ ಆಗಲು ಬಿಡುವುದಿಲ್ಲ.

  1. ಏಳು ವಾರಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿದ ಬಳಿಕ ಪ್ರತಿಯೊಬ್ಬರಿಗೂ ಆರ್‌ಟಿ-ಪಿಸಿಆರ್‌ ಕಡ್ಡಾಯ. ಪರೀಕ್ಷೆ ವೇಳೆ ರೋಗಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ಸೂಚನೆಗಳನ್ನು ಪಡೆದು, ರಾಜ್ಯ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು.
  2. ಆರ್‌ಟಿ-ಪಿಸಿಆರ್‌ನಲ್ಲಿ ಪಾಸಿಟಿವ್‌ ಕಂಡುಬಂದ ವ್ಯಕ್ತಿಯನ್ನು ಹಾಗೂ ಅವರೊಂದಿಗೆ ಸಂಪರ್ಕಕ್ಕೆ ಬಂದ ಮಂದಿಯನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು.
  3. ಎರಡನೇ ಡೋಸ್ ಪಡೆದ ಬಳಿಕವೂ ಸೋಂಕು ತಗುಲಿದಲ್ಲಿ, ಅಂಥವರ ಸ್ಯಾಂಪಲ್‌ಗಳನ್ನು ಕಡ್ಡಾಯವಾಗಿ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುವುದು.
  4. ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರ ಇರುವ

- Advertisement -
spot_img

Latest News

error: Content is protected !!