Tuesday, May 7, 2024
Homeಕರಾವಳಿಕಾಸರಗೋಡುಕಾಸರಗೋಡು : ಮಕ್ಕಳು ಹಾಗೂ ಯುವಕರಲ್ಲೇ ಹೆಚ್ಚಿರುವ ಕೊರೋನಾ ಸೋಂಕು; ಡಿಸಿ ನೇತೃತ್ವದಲ್ಲಿ ನಡೆದ ...

ಕಾಸರಗೋಡು : ಮಕ್ಕಳು ಹಾಗೂ ಯುವಕರಲ್ಲೇ ಹೆಚ್ಚಿರುವ ಕೊರೋನಾ ಸೋಂಕು; ಡಿಸಿ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಬಹಿರಂಗ!

spot_img
- Advertisement -
- Advertisement -

ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಸ್ವಾಗತ್ ಭಂಡಾರಿ ನೇತೃತ್ವದಲ್ಲಿ ನಡೆಸಿದ ಅಧ್ಯಯನದಲ್ಲಿ ಜಿಲ್ಲೆಯಲ್ಲಿ ಅಪ್ರಾಪ್ತ ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚಿನ ಪ್ರಮಾಣದ ಕೊರೋನಾ ಸೋಂಕು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಒಟ್ಟು 5,055 ಮಂದಿಯ ಸ್ಯಾಂಪಲ್ ಗಳನ್ನು ತಪಾಸಣೆ ನಡೆಸಲಾಗಿದ್ದು ಕಾರ್ಮಿಕರು , ವರ್ತಕರಲ್ಲಿ ಸೋಂಕು ಹೆಚ್ಚಿದೆ. ವಿವಿಧ ಪ್ರಾಯದದವರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಲಾಗಿದ್ದು , ಈ ಪೈಕಿ ಮಕ್ಕಳು, ಯುವಕರಲ್ಲಿ 27. 4 ಶೇಕಡಾ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಎರಡು ವರ್ಷದಿಂದ 27 ವರ್ಷ ಪ್ರಾಯದ ನಡುವೆ 1, 383 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕಾರ್ಮಿಕರು ಸೇರಿದಂತೆ 1, 029 ಮಂದಿಯಲ್ಲಿ ಅಂದರೆ ಶೇ . 20. 4 ಮಂದಿಯಲ್ಲಿ ಸೋಂಕು ಗುರುತಿಸಲಾಗಿದೆ.

ಅತೀ ಹೆಚ್ಚು ಸೋಂಕಿತರಲ್ಲಿ 18- 21 ಪ್ರಾಯ ದ 388 ಮಂದಿ ( ಶೇ . 18) , ಎರಡರಿಂದ 10 ವರ್ಷದೊಳಗಿನ 265 ಮಂದಿ ( ಶೇ . 19) , 11 ರಿಂದ 14 ವರ್ಷದ 303 ಮಂದಿಯಲ್ಲಿ ಶೇಕಡಾ 22 ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 15 ರಿಂದ 17 ವರ್ಷದೊಳಗಿನ 306 , 22 ರಿಂದ 26 ವರ್ಷದ 108 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ . 27 ವರ್ಷ ಮೇಲ್ಟಟ್ಟ 13 ಮಂದಿಗೆ ಸೋಂಕು ಪತ್ತೆಯಾಗಿದೆ.

ಇತ್ತೀಚಿಗೆ ನಿಯಮ ಉಲ್ಲಂಘಿಸಿ ಗುಂಪುಗೂಡುವುದು , ಕ್ರೀಡೆ – ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುತ್ತಿರುವುದು ಜಾಸ್ತಿಯಾಗಿದೆ. ಇದು ಸೋಂಕು ತಗುಲಲು ಕಾರಣವಾಗುವುದರ ಜೊತೆಗೆ ಮಕ್ಕಳ ಮೂಲಕ ಸೋಂಕು ಮನೆಗಳಲ್ಲಿರುವ ವಯಸ್ಕರಿಗೂ ಹರಡಲು ಕಾರಣವಾಗುತ್ತಿದೆ.

ಇನ್ನು ವಿದ್ಯಾರ್ಥಿಗಳು ಶಾಲೆಗೇ ಹೋಗದಿದ್ದರೂ ಸೋಂಕು ಹರಡುತ್ತಿರುವುದು ಗಂಭೀರ ವಿಷಯವಾಗಿದೆ. ಇದಕ್ಕೆ ಪ್ರತಿಯಾಗಿ ಟ್ಯೂಷನ್’ಗಳನ್ನು ನಡೆಸಬಾರದು ಹಾಗೂ ಕೋವಿಡ್ ಮಾನದಂಡ ಪಾಲಿಸದ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಾಗೂ ಮಕ್ಕಳಿಗೆ ವ್ಯಾಕ್ಸಿನ್ ಆಗದಿರುವುದರಿಂದ ಅಪ್ರಾಪ್ತರು ಸಾರ್ವಜನಿಕ ಸ್ಥಳಗಳಿಗೆ ತೆರಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!