Wednesday, June 24, 2026
Homeಉದ್ಯಮಕಲ್ಲೇರಿಯಲ್ಲಿ ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ವ್ಯಾಪಾರ ಮಳಿಗೆ ಶುಭಾರಂಭ 

ಕಲ್ಲೇರಿಯಲ್ಲಿ ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ವ್ಯಾಪಾರ ಮಳಿಗೆ ಶುಭಾರಂಭ 

- Advertisement -
- Advertisement -

ಬೆಳ್ತಂಗಡಿ: ತಣ್ಣೀರುಪoತ ಗ್ರಾಮದ ಕಲ್ಲೇರಿ ಮುಖ್ಯರಸ್ತೆಯ ಮಾತೃಛಾಯ ಕಾಂಪ್ಲೆಕ್ಸ್ ನಲ್ಲಿ ಮೇ 06 ಸೋಮವಾರದಂದು ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ ಮತ್ತ ಕಾಡುತ್ಪತಿ ವ್ಯಾಪಾರದ ಮಳಿಗೆಯು ಶುಭಾರಂಭಗೊಂಡಿತು.

ಮಳಿಗೆಯನ್ನು ದೀಪ ಬೆಳಗಿಸುವ ಮೂಲಕ ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು, ನೇತ್ರಾವತಿ ಹೋಟೆಲ್ ಮಾಲಕರಾದ ಧರ್ಣಪ್ಪ ಗೌಡ, ತಣ್ಣೀರುಪoತ ಗ್ರಾಮ ಪಂಚಾಯತ್ ಸದಸ್ಯರಾದ ಅಯೂಬ್ ಕರಾಯ, ಸೀತಾರಾಮ ಮಡಿವಾಳ, ಯಶೋಧರ ಶೆಟ್ಟಿ, ಹಾಗೂ ಶ್ರೀ ಮಾತಾ ಸುಪಾರಿ ಟ್ರೇಡರ್ಸ್ ಮಾಲಕರಾದ ಸಚಿನ್ ಗೌಡ, ಶ್ರೀದೇವಿ ಸುಪಾರಿ ಟ್ರೇಡರ್ಸ್ ಮಾಲಕರಾದ ಪ್ರಶಾಂತ್ ಶೆಟ್ಟಿ ಮುಡಾಯೂರು, ಶಾರದಾ ರೈ ಮುಗೆರೋಡಿ, ಅಣ್ಣಿ ಶೆಟ್ಟಿ ಪಣೆಕ್ಕರ, ರಾಜೇಶ್ ಶೆಟ್ಟಿ ನವಶಕ್ತಿ ಉಪಸ್ಥಿತರಿದ್ದು, ಶುಭ ಹಾರೈಸಿದರು.

ನರಸಿಂಹ ಶೆಟ್ಟಿ, ಮತ್ತು ಮನೆಯವರು ಬಂದಂತಹ ಅತಿಥಿ ಗಣ್ಯರನ್ನು ಸತ್ಕರಿಸಿದರು. ಅಂಗಡಿ ಮಾಲಕರಾದ ರಂಜಿತ್ ಶೆಟ್ಟಿ ಪಣೆಕ್ಕರ ಸ್ವಾಗತಿಸಿದರು. ಕಟ್ಟಡ ಮಾಲಿಕರಾದ ಕೃಷ್ಣಪ್ಪ ಪೂಜಾರಿ ಧನ್ಯವಾದ ಹೇಳಿದರು.

ಪಣೆಕ್ಕರ ಸುಪಾರಿ ಟ್ರೇಡರ್ಸ್ ಮಳಿಗೆಯಲ್ಲಿ ಅಡಿಕೆ, ಗೇರುಬೀಜ, ತೆಂಗಿನಕಾಯಿ, ಕಾಳುಮೆಣಸು, ಮುಂತಾದ ಕಾಡುತ್ಪತಿಗಳನ್ನು ಖರೀದಿಸಲಾಗುವುದು ಎಂದು ಮಾಲಕರಾದ ರಂಜಿತ್ ಶೆಟ್ಟಿ ಪಣೆಕ್ಕರ ತಿಳಿಸಿದರು.

- Advertisement -

Latest News

error: Content is protected !!