Thursday, June 4, 2026
Homeಅಪರಾಧಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ಅನ್ಯಕೋಮಿನ ಯುವಕನ ವಿರುದ್ಧ ದೂರು ದಾಖಲು

ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ಅನ್ಯಕೋಮಿನ ಯುವಕನ ವಿರುದ್ಧ ದೂರು ದಾಖಲು

- Advertisement -
- Advertisement -

ಸುಳ್ಯ: ಅನ್ಯಕೋಮಿನ ಯುವಕನೊಬ್ಬ ಗಾಂಧಿನಗರದ ಏರ್‌ಟೆಲ್‌ ಮಳಿಗೆಗೆ ಕರೆನ್ಸಿ ರಿಚಾರ್ಚ್‌ಗೆಂದು ಬಂದ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿದ್ದು, ಘಟನೆ ಕುರಿತು ಯುವತಿಯ ಮನೆಯವರು ಪೊಲೀಸ್‌ ಠಾಣೆಗೆ ದೂರು ನೀಡಿದ ಘಟನೆ ಸೋಮವಾರ ನಡೆದಿದೆ.

ಘಟನೆಯ ವಿವರ: ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ಮೊಬೈಲ್‌ ರಿಚಾರ್ಜ್‌ಗೆ ಅಂಗಡಿಯೊಂದಕ್ಕೆ ಬಂದ ಸಂದರ್ಭದಲ್ಲಿ ಆಕೆಯನ್ನು ಕುಳಿತುಕೊಳ್ಳುವಂತೆ ಹೇಳಿದ ಯುವಕ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದನು. ಇದನ್ನ ಗಮನಿಸಿ ಆಕ್ಷೇಪಿಸಿದ ಯುವತಿ ಆತನ ಮೊಬೈಲನ್ನು ಕಸಿದು ನೋಡಿದಾಗ ತನ್ನ ಫೋಟೋ ಇರುವುದನ್ನು ನೋಡಿ ಗಾಬರಿಯಿಂದ ಅದನ್ನು ಡಿಲೀಟ್‌ ಮಾಡಿದ್ದಾಳೆ. ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.

- Advertisement -

Latest News

error: Content is protected !!