Thursday, October 29, 2026
Homeಅಪರಾಧಎಂಡಿಎಂಎ ಮಾದಕ ದ್ರವ್ಯ ಸಹಿತ ಯುವತಿ, ಯುವಕನ ಬಂಧನ

ಎಂಡಿಎಂಎ ಮಾದಕ ದ್ರವ್ಯ ಸಹಿತ ಯುವತಿ, ಯುವಕನ ಬಂಧನ

- Advertisement -
- Advertisement -

ಕಾಸರಗೋಡು: ಲಾಡ್ಜ್‌ನಲ್ಲಿ ಎಂಡಿಎಂಎ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಯುವತಿ ಹಾಗೂ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೇಳ ಕಡಂಬಳ ನಿವಾಸಿ ಶೆರೀಫಾ (35) ಮತ್ತು ಕಾಞಂಗಾಡ್ ಕರುವಳಂ ಪೂಮಾಡತ್ ಹೌಸ್ ನಿವಾಸಿ ಮುಹಮ್ಮದ್ ರಾಫಿ (31) ಎಂದು ಗುರುತಿಸಲಾಗಿದೆ.

ಕಾಸರಗೋಡು ಟೌನ್ ಸಬ್ ಇನ್‌ಸ್ಪೆಕ್ಟರ್ ಪಿ.ವಿ. ಮನು ಅವರ ನೇತೃತ್ವದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿರೋಧಕ ವಿಶೇಷ ಕಾರ್ಯಪಡೆ ಹಾಗೂ ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!