Sunday, May 19, 2024
Homeಕರಾವಳಿಮಂಗಳೂರುಬಂಟ್ವಾಳ:ಮದುವೆ ಹಾಲ್ ಬಳಿ ವ್ಯಕ್ತಿಯ ಮೃತದೇಹ ಪತ್ತೆ

ಬಂಟ್ವಾಳ:ಮದುವೆ ಹಾಲ್ ಬಳಿ ವ್ಯಕ್ತಿಯ ಮೃತದೇಹ ಪತ್ತೆ

spot_img
- Advertisement -
- Advertisement -

ಬಂಟ್ವಾಳ:ಮದುವೆ ಹಾಲ್ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ತುಂಬೆ ವಳವೂರಿನಲ್ಲಿರುವ ಮದುವೆ ಹಾಲ್ ಬಳಿ ನಡೆದಿದೆ. ಉಪ್ಪಿನಂಗಡಿ ವಳಾಲು ನಿವಾಸಿ ಸಂತೋಷ್ ಮೃತ ದುರ್ದೈವಿ.

ಮದುವೆ ಸಭಾಂಗಣದ ಕಾಂಪೌಂಡ್ ನ ಒಳಗಡೆಯಲ್ಲಿ ಮೃತದೇಹ ರಕ್ತಸಿಕ್ತವಾಗಿ ಬಿದ್ದುಕೊಂಡಿದ್ದು, ಹೊರಗಡೆಯಲ್ಲಿ ಸಂತೋಷ್ ಮೃತದೇಹ ಪತ್ತೆಯಾಗಿದೆ. ಸಂತೋಷ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೋಲೀಸ್ ಮೂಲಗಳ ಪ್ರಕಾರ ಸಂತೋಷ್ ಬೈಕ್ ನಿಲ್ಲಿಸಿ ಕಾಂಪೌಂಡ್ ಮೇಲೆ ಕುಳಿತುಕೊಂಡಿದ್ದಿರಬೇಕು. ಆ ವೇಳೆ ನಿಯಂತ್ರಣ ಕಳೆದು ಕೆಳಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಪೆಕ್ಟರ್ ಶಿವಕುಮಾರ್, ಪಿಎಸ್ಐ ಹರೀಶ್ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!