Sunday, May 19, 2024
Homeಕರಾವಳಿಕಾಸರಗೋಡಿನ ಸಾರಿಗೆ ಬಸ್‌ಗಳಲ್ಲಿ ಕ್ಯಾಮರಾ ಅಳವಡಿಕೆ

ಕಾಸರಗೋಡಿನ ಸಾರಿಗೆ ಬಸ್‌ಗಳಲ್ಲಿ ಕ್ಯಾಮರಾ ಅಳವಡಿಕೆ

spot_img
- Advertisement -
- Advertisement -

ಕೇರಳ: ಇ‌ಲ್ಲಿನ ರಾಜ್ಯ ರಸ್ತೆಸಾರಿಗೆ ನಿಗಮದ ಕಾಸರಗೋಡು ಡಿಪೋದ ಐದು ಬಸ್‌ಗಳಲ್ಲಿ ಕ್ಯಾಮರಾವನ್ನು ಅಳವಡಿಲಾಗಿದೆ.

ಸುಳ್ಯಕ್ಕೆ ಸಂಚರಿಸುವ ಮೂರು ಅಂತಾರಾಜ್ಯ ಬಸ್‌ಗಳಲ್ಲೂ, ಕೋಟ್ಟಯಂಗೆ ಸಂಚರಿಸುವ ಎರಡು ಬಸ್‌ಗಳಿಗೆ ಈ ಕ್ಯಾಮರಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಕ್ಯಾಮರಾ ಅಳವಡಿಸಲು ಒಂದು ಬಸ್‌ನಲ್ಲಿ 15 ಸಾವಿರ ರೂ. ವೆಚ್ಚವಾಗುತ್ತಿದೆ. ಬಸ್‌ನ ಮುಂಭಾಗದ ದೃಶ್ಯಗಳನ್ನು ಸೆರೆಹಿಡಿಯಲು, ಪ್ರಯಾಣಿಕರನ್ನು ಸೆರೆ ಹಿಡಿಯುವ ರೀತಿಯಲ್ಲಿ 2 ಕ್ಯಾಮರಾಗಳು ಬಸ್‌ನ ಒಳಗಿವೆ.

ಸ್ಟೇಜ್‌ ಕ್ಯಾರೇಜ್‌ ವಾಹನಗಳಲ್ಲಿ ಕಡ್ಡಾಯವಾಗಿ ಕ್ಯಾಮರಾ ಇರಬೇಕೆಂಬ ಆದೇಶದ ವಿರುದ್ಧ ಖಾಸಗಿ ಬಸ್‌ ಮಾಲಕರು ನ್ಯಾಯಾಲಯಕ್ಕೆ ಮನವಿ ನೀಡಿದ ಹಿನ್ನೆಲೆಯಲ್ಲಿ ಅವುಗಳಲ್ಲಿ ಕ್ಯಾಮರಾ ಅಳವಡಿಕೆಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!