Thursday, June 4, 2026
Homeಕರಾವಳಿಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಬಂಧನ; ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ಪ್ರತಿಭಟನೆ

ಬಿಜೆಪಿ ಯುವ ಮೋರ್ಛಾ ಅಧ್ಯಕ್ಷ ಬಂಧನ; ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ಪ್ರತಿಭಟನೆ

- Advertisement -
- Advertisement -

ಬೆಳ್ತಂಗಡಿ: ಬಿಜೆಪಿ ಯುವ ಮೋರ್ಛಾ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿರುವುದಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪೊಲೀಸ್ ಠಾಣೆ ಎದುರು ಕಾರ್ಯಕರ್ತರ ಜೊತೆ ಧರಣಿ ನಡೆಸಿದ್ದಾರೆ.

ಬಿಜೆಪಿ ಯುವ ಮೋರ್ಛಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬವರನ್ನು ಬಂಧನ ಮಾಡಿದ್ದು, ಈ ಸಂಬಂಧವಾಗಿ ಪೊಲೀಸರ ವಿರುದ್ಧ ಶಾಸಕ ಹರೀಶ್ ಪೂಂಜ ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಅಕ್ರಮ ಕಲ್ಲು ಕೋರೆ ಮೇಲಿನ ದಾಳಿಯ ನೆಪದಲ್ಲಿ ಬಿಜೆಪಿ ಯುವ ಮೋರ್ಛಾ ಅಧ್ಯಕ್ಷರನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರ ವಿರುದ್ಧ ಆರೋಪ ಮಾಡಲಾಗಿದೆ.ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟುವಿನಲ್ಲಿರುವ ಕಲ್ಲಿನ ಕೋರೆಗೆ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆದಿತ್ತು.

ಈ ನೆಪದಲ್ಲಿ ಶಶಿರಾಜ್ ಶೆಟ್ಟಿ ಅವರನ್ನು ಮನೆಯಿಂದ ಬಂಧಿಸಿದ್ದು ಕೂಡಲೇ ಬಿಡುಗಡೆಗೊಳಿಸುವಂತೆ ಶಾಸಕ ಪೂಂಜ ಆಗ್ರಹಿಸಿದ್ದಾರೆ.ಪ್ರಮೋದ್ ದಿಡುಪೆ ದ.ಕ‌ ಜಿಲ್ಲಾ ಬಿಜೆಪಿ ಯುವ ಮೊರ್ಚಾ ಉಪಾಧ್ಯಕ್ಷದ್ದಾರೆ. ಶಶಿರಾಜ್ ಶೆಟ್ಟಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ.

- Advertisement -

Latest News

error: Content is protected !!