Tuesday, May 21, 2024
Homeಇತರಕೊರೊನಾ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆಯೇ ಆರೋಗ್ಯ ಇಲಾಖೆ ?

ಕೊರೊನಾ ವಿಚಾರದಲ್ಲಿ ಸುಳ್ಳು ಲೆಕ್ಕ ನೀಡುತ್ತಿದೆಯೇ ಆರೋಗ್ಯ ಇಲಾಖೆ ?

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೊ ಕೊರೊನಾ ಆರ್ಭಟ ಜೋರಾಗ್ತಿದೆ. ಪ್ರತಿದಿನ ಹೆಲ್ತ್ ಬುಲೆಟಿಲ್ ನಲ್ಲಿ ಬರುವ ಅಂಕಿ ಅಂಶಗಳನ್ನು ನೋಡಿದ್ರೆ ಇದೆಲ್ಲಿಗೆ ಹೋಗಿ ಮುಟ್ಟುತ್ತೋ ಅನ್ನೋ ಭಯ ಕಾಡೋದಕ್ಕೆ ಶುರುವಾಗುತ್ತಿದೆ.

ಆದ್ರೆ ಸದ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿರುವ ಹೆಲ್ತ್ ಬುಲೆಟಿನ್ ನನ್ನು ಕೂಡ ಅನುಮಾನದಿಂದ ನೋಡುವ ಹಾಗಾಗಿದೆ. ಅಲ್ಲದೇ ಈ ಬಗ್ಗೆ ಒಂದಷ್ಟು ಸುದ್ದಿ ಹರಿದಾಡ ತೊಡಗಿವೆ. ಅದಕ್ಕೆ ಪುಷ್ಟಿ ನೀಡುತ್ತಿದೆ. ನಿನ್ನೆ ಮೈಸೂರಿನ ಬಂದಿರುವ 51 ಕೊರೊನಾ ಪಾಸಿಟಿವ್ ಕೇಸುಗಳನ್ನು ನಿನ್ನೆಯ ಹೆಲ್ತ್ ಬುಲೆಟಿನ್ ನಲ್ಲಿ ಸೇರಿಸದೇ ಇರೋದು ಮೈಸೂರಿನಲ್ಲಿ 51  ಪಾಸಿಟಿವ್ ಕೇಸುಗಳು ಬಂದಿವೆ ಎಂಬ ಮಾಹಿತಿ ಆರೋಗ್ಯ ಇಲಾಖೆಗೆ . ಮಧ್ಯಾಹ್ನದ ಬಳಿಕ  ಗೊತ್ತಾಗಿದ್ದರೂ ಹೆಲ್ತ್ ಬುಲೆಟಿನ್ ನಲ್ಲಿ ಅದು ನಮೂದಾಗಿಲ್ಲ. ಇದು ಆರೋಗ್ಯ ಇಲಾಖೆ ಕೊರೊನಾ ಸೋಂಕಿತರ ನಿಜವಾದ ಅಂಕಿ ಅಂಶಗಳನ್ನು ಮುಚ್ಚಿಡುತ್ತಿದೆಯೋ ಅನ್ನೋ ಅನುಮಾನ ಮೂಡಿಸುತ್ತಿದೆ. ಮತ್ತೊಂದು ಕಡೆ ಕೆಲವೊಂದು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಪಾಸಿಟಿವ್ ಕೇಸುಗಳು ಬಂದರೂ ಅವನ್ನು ಮುಚ್ಚಿಡಲಾಗುತ್ತಿದೆ. ಆರೋಗ್ಯ ಇಲಾಖೆಗೆ ಹಾಗಾಗಿ ಸರಿಯಾದ ಅಂಕಿ ಅಂಶಗಳು ಸಿಗುತ್ತಿಲ್ಲ. ಹಾಗಾಗಿ ಪ್ರತಿದಿನ ಬರೋ ಹೆಲ್ತ್ ಬುಲೆಟಿನ್ ನಲ್ಲಿರುವ ಅಂಕಿ ಅಂಶಗಳನ್ನು ನಿಜ ಎಂದು ಹೇಗೆ ನಂಬೋದು ಅನ್ನೋ ಅನುಮಾನ ಶುರುವಾಗಿದೆ.

- Advertisement -
spot_img

Latest News

error: Content is protected !!