Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಯುವಕನಿಂದ ಮತ್ತೊಬ್ಬ ಯುವಕನಿಂದ ಚೂರಿ ಇರಿತ

ಮಂಗಳೂರು: ಯುವಕನಿಂದ ಮತ್ತೊಬ್ಬ ಯುವಕನಿಂದ ಚೂರಿ ಇರಿತ

- Advertisement -
- Advertisement -

ಮಂಗಳೂರು: ಯುವಕನೊಬ್ಬ ಮತ್ತೊಬ್ಬ ಯುವಕನಿಗೆ ಚೂರಿ ಇರಿದಿರುವ ಘಟನೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಬಳಿ ಸೋಮವಾರ ಸಂಜೆ ನಡೆದಿದೆ.ಬಂಟ್ವಾಳ ಪುಣಚದ ಸಚಿನ್‌ (31) ಚೂರಿ ಇರಿತಕ್ಕೆ ಒಳಗಾದವರು. ಕೇರಳ ಕೊಲ್ಲಂನ ನೌಫಾಲ್‌ ಚೂರಿ ಇರಿದ ಯುವಕ.

ನೌಫಾಲ್‌ ಮತ್ತು ಆತನ ಗೆಳಯ ಅನಾಸ್‌ ಕೇರಳದಿಂದ ಮಂಗಳೂರಿಗೆ ಬಂದಿದ್ದರು.ಅಲ್ಲಿ ಸಚಿನ್‌ ಜತೆ ಸೇರಿ ಊಟ ಮಾಡಿ ರೈಲು ನಿಲ್ದಾಣದ ಬಳಿ ಮಲಗಿದ್ದರು. ಸೋಮವಾರ ಬೆಳಗ್ಗೆ ನೌಫಾಲ್‌ ಆತನ ಮೊಬೈಲ್‌ ಮತ್ತು ಒಂದು ಸಾವಿರ ನಗದನ್ನು ಸಚಿನ್‌ ಕದ್ದಿದ್ದಾನೆ ಎಂದು ಆರೋಪಿಸಿದ್ದ. ಇದರಿಂದಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿತ್ತು. ಈ ವೇಳೆ ನೌಫಾಲ್‌ ಚೂರಿಯಿಂದ ಸಚಿನ್‌ಗೆ ಹೊಟ್ಟೆಗೆ ಇರಿದಿದ್ದಾನೆ. ಸಚಿನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ನೌಫಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

- Advertisement -

Latest News

error: Content is protected !!