Sunday, May 5, 2024
Homeಇತರ10 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನೇ ಟಾರ್ಗೇಟ್ ಮಾಡ್ತಿದಿಯಾ ಕೊರೊನಾ?

10 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನೇ ಟಾರ್ಗೇಟ್ ಮಾಡ್ತಿದಿಯಾ ಕೊರೊನಾ?

spot_img
- Advertisement -
- Advertisement -

ಬೆಂಗಳೂರು :  ದಿನೇ ದಿನೇ ರಾಜ್ಯದಲ್ಲಿ  ಕೊರೊನಾ ಅನ್ನೋ ನರಹಂತಕನ ಆರ್ಭಟ ಜೋರಾಗ್ತಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಏರುತ್ತಿರೋದನ್ನು ಗಮನಿಸಿದ್ರೆ ಸದ್ಯಕ್ಕಂತೂ ಇದರ ಅಟ್ಟಹಾಸ ನಿಲ್ಲೋ ಲಕ್ಷಣಗಳು ಕಾಣಿಸ್ತಿಲ್ಲ.

ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಕಂಡು ಬರುತ್ತಿರುವ ಕೊರೊನಾ ಕೇಸುಗಳನ್ನು ಗಮನಿಸಿದ್ರೆ ಇನ್ನೊಂದು 15 ದಿನಗಳು ಕಳೆದ್ರೆ ಮನೆ ಮನೆಯಲ್ಲೂ ಕೊರೊನಾ ರೋಗಿಗಳು ಇರುವ ಸ್ಥಿತಿ ಬಂದ್ರು ಅಚ್ಚರಿಯಿಲ್ಲ ಅನ್ಸುತ್ತೆ. ಇದೆಲ್ಲಕ್ಕಿಂತಲೂ ಹೆಚ್ಚು ಭಯ ಮೂಡಿಸಿರೋದು ದಿನೇ ದಿನೇ ಹೆಚ್ಚಾಗಿ ಮಕ್ಕಳಲ್ಲಿ ಸೋಂಕು ಕಂಡು ಬರುತ್ತಿರೋದು.

ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು 10 ವರ್ಷದ ಕೆಳಗಿನ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದನ್ನು ನೋಡಿದ್ರೆ ಕೊರೊನಾ 10 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನೇ ಟಾರ್ಗೆಟ್ ಮಾಡಿದಂತೆ ಕಾಣ್ತಿಸಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚಾಗಿ ಮಕ್ಕಳಲ್ಲೇ ಸೋಂಕು ಕಾಣಿಸಿಕೊಳ್ತಿದೆ. ಕೊಂಚ ಸಮಾಧಾನದ ವಿಚಾರ ಅಂದ್ರೆ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೋಲಿಸಿದ್ರೆ ಮಕ್ಕಳು ಬೇಗ ಗುಣಮುಖರಾಗುತ್ತಿದ್ದಾರೆ. ಆದರೂ ಮಕ್ಕಳನ್ನು ಆದಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳೋದು ಉತ್ತಮ. ಮಕ್ಕಳನ್ನು ಆದಷ್ಟು ಹೊರಗಡೆ ಕಳುಹಿಸದೇ ಅವರನ್ನು ಮನೆಯಲ್ಲೇ ಇರುವಂತೆ ನೋಡಿಕೊಳ್ಳೋದು ಸದ್ಯಕ್ಕೆ ಎಲ್ಲಾ ಹೆತ್ತವರು ಮಾಡಬೇಕಾದ ಬಹು ಮುಖ್ಯ ಕೆಲಸವಾಗಿದೆ.

- Advertisement -
spot_img

Latest News

error: Content is protected !!