Sunday, June 7, 2026
Homeಕರಾವಳಿಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಂಪಾಜೆ ಸಹಕಾರಿ ಸಂಘಕ್ಕೆ ಭೇಟಿ

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಂಪಾಜೆ ಸಹಕಾರಿ ಸಂಘಕ್ಕೆ ಭೇಟಿ

- Advertisement -
- Advertisement -

ಸುಳ್ಯ:  ಸಹಕಾರ ಸಚಿವ ಸೋಮಶೇಖರ ಎಸ್. ಟಿ ರವರು ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು. ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ರವರು ಸಚಿವರನ್ನು ಸ್ವಾಗತಿಸಿ ಸಂಘದ ಪರವಾಗಿ ಸನ್ಮಾನಿಸಿದರು. ಸಚಿವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರ ಸಾಲ ಮನ್ನಾದ ಶೀಘ್ರ ಬಿಡುಗಡೆ, ತಾಲೂಕಿನ ಹಳದಿ ರೋಗ ಪೀಡಿತ ಪ್ರದೇಶದ ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಕೃಷಿ ಸಾಲಗಳ ವಾಯಿದೆ ದಿನಾಂಕವನ್ನು ಜೂನ್ 3೦ ರಿಂದ ಅಗೋಸ್ಟ್ 3೦ ರವರೆಗೆ ಮುಂದುವರಿಸಬೇಕೆಂದು ಸಂಪಾಜೆ ಗ್ರಾಮದ ರೈತರ ಹಾಗೂ ಜಿಲ್ಲೆಯ ಎಲ್ಲಾ ರೈತರ ಪರವಾಗಿ ಮನವಿ ಮಾಡಿದರು. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಶೀಘ್ರವಾಗಿ ಆದೇಶ ನೀಡುವುದಾಗಿ ಭರವಸೆ ನೀಡಿದರು.

- Advertisement -

Latest News

error: Content is protected !!