Monday, April 29, 2024
Homeತಾಜಾ ಸುದ್ದಿರಾಯಚೂರು ಜಿಲ್ಲೆಯಲ್ಲಿ 1563ನೇ ಮದ್ಯವರ್ಜನಾ ಶಿಬಿರ ಉದ್ಘಾಟನೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ...

ರಾಯಚೂರು ಜಿಲ್ಲೆಯಲ್ಲಿ 1563ನೇ ಮದ್ಯವರ್ಜನಾ ಶಿಬಿರ ಉದ್ಘಾಟನೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕಾರ್ಯಕ್ರಮ

spot_img
- Advertisement -
- Advertisement -

ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ದೇವದುರ್ಗ ರಾಯಚೂರು ಜಿಲ್ಲೆ, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ದೇವದುರ್ಗ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಪುರಸಭೆ ದೇವದುರ್ಗ, ಆರೋಗ್ಯ ಇಲಾಖೆ ದೇವದುರ್ಗ, ಪೋಲೀಸ್ ಇಲಾಖೆ ದೇವದುರ್ಗ ಹಾಗೂ ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ದೇವದುರ್ಗ ತಾಲೂಕಿನ ಡಾ|| ಬಾಬು ಜಗಜೀವನರಾಮ್ ಸಭಾಭವನದಲ್ಲಿ 1563ನೇ ಮದ್ಯವರ್ಜನಾ ಶಿಬಿರವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷರಾದ ಶರಣಗೌಡ ಬಕ್ರಿ ಗೌರಂಪೇಟೆಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಯವರು ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು ಇದರಲ್ಲೊಂದಾದ ಮದ್ಯವರ್ಜನ ಶಿಬಿರವು ಮಹಿಳೆಯರ ಕಣ್ಣೀರೊರೆಸುವ ಪುಣ್ಯದ ಕಾರ್ಯದಿಂದ ಕುಟುಂಬ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಶಿಬಿರಗಳಿಂದ ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರು ಮದ್ಯವ್ಯಸನದಿಂದ ಮುಕ್ತವಾಗಿದ್ದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಪರಮಪೂಜ್ಯ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀಯವರ ಆಶಯದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಶಿಬಿರದ ಪ್ರಯೋಜನ ಪಡೆದು ಶಿಬಿರಾರ್ಥಿಗಳು ವ್ಯಸನಮುಕ್ತರಾಗಿ ನೆಮ್ಮದಿಯ ಜೀವನ ನಡೆಸಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಭಾನುಪ್ರಕಾಶ್ ಖೇಣೆದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ ಕುಮಾರ್ ಜಿಲ್ಲಾ ನಿರ್ದೇಶಕರು ರಾಯಚೂರು, ನಾಗರಾಜ್ ಪಾಟೀಲ್ ಗೌರಂಪೇಟೆ, ವೆಂಕಟರಾಯ ಗೌಡ ಬೆನಕನ, ಶಿವರುದ್ರಪ್ಪ, ಅಕ್ಕಮಹಾದೇವಿ.ಆರ್. ಪಾಟೀಲ್, ಡಾ.ಲೀಲಾವತಿ, ಆರಕ್ಷಕ ಠಾಣೆಯ ASI ಕೃಷ್ಣ ನಾಯಕ್, ಶಿವಲಿಂಗಪ್ಪ ಘಂಟಿ, ವೆಂಕಟೇಶ್.ಇರಬಗೇರಾ, ತಬುಸಮ್ ಪುರಸಭೆ ಸದಸ್ಯರು, ಶರಣಪ್ಪ ಹುಣಸಗಿ, ಸುಭಾಶ್ಚಂದ್ರ ಪಾಟೀಲ್, ಹನುಮರೆಡ್ಡಿ ಪಾಟೀಲ್, ಕರಿಯಪ್ಪ, ಅಮರೇಶ್ ಇಟಗಿ, ಬೂದಪ್ಪಸ್ವಾಮಿ, ವೆಂಕನಗೌಡ ಹಂಚಿನಾಳ, ಯೋಜನಾಧಿಕಾರಿಗಳಾದ ಮಾಧವ ನಾಯಕ್, ರಾಜೇಶ್.ಎಂ ಹಾಗೂ ವಲಯದ ಮೇಲ್ವಿಚಾರಕರು, ಊರಿನ ಗಣ್ಯರು, ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಮತ್ತು ಸೇವಾಪ್ರತಿನಿಧಿಗಳು ಹಾಜರಿದ್ದರು.

- Advertisement -
spot_img

Latest News

error: Content is protected !!