Friday, May 10, 2024
Homeಪ್ರಮುಖ-ಸುದ್ದಿದಸರಾ ಮಾರ್ಗಸೂಚಿ ಪ್ರಕಟ : ಈ ಬಾರಿ 'ಜಂಬೂ ಸವಾರಿ'ಯಲ್ಲಿ 300 ಮಂದಿಗೆ ಮಾತ್ರ ಅವಕಾಶ

ದಸರಾ ಮಾರ್ಗಸೂಚಿ ಪ್ರಕಟ : ಈ ಬಾರಿ ‘ಜಂಬೂ ಸವಾರಿ’ಯಲ್ಲಿ 300 ಮಂದಿಗೆ ಮಾತ್ರ ಅವಕಾಶ

spot_img
- Advertisement -
- Advertisement -

ಮೈಸೂರು : ಕೊರೊನಾದಿಂದಾಗಿ ಜನ ಏನೆಲ್ಲಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ಪ್ರತಿದಿನ ಆತಂಕದಲ್ಲೇ ಬದುಕುವಂತಾಗಿದೆ, ಅಲ್ಲದೇ ಅದೆಷ್ಟೋ ಶುಭ ಸಮಾರಂಭಗಳು, ಹಬ್ಬ ಹರಿದಿನಗಳ ಆಚರಣೆಗೂ ಕೊರೊನಾ ಬ್ರೇಕ್ ಹಾಕಿದೆ.

ಇನ್ನು ಪ್ರತಿವರ್ಷ ಅತ್ಯಂತ ಸಂಭ್ರಮದಿಂದ ಆಚರಿಸುವ ನಮ್ಮ ನಾಡ ಹಬ್ಬ ದಸರಾಗೂ ಕೊರೊನಾ ಕರಿ ನೆರಳು ತಪ್ಪಿಲ್ಲ. ಈ ವರ್ಷ ಅತ್ಯಂತ ಸರಳವಾಗಿ ದಸರಾ ಆಚರಿಸಲಾಗುತ್ತಿದೆ.  ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ. ಅಲ್ಲದೇ , ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಜಂಬೂ ಸವಾರಿಯಲ್ಲಿ 300 ಮಂದಿಗೆ ಮಾತ್ರ ಅವಕಾಶ ನೀಡಿದೆ.

ಆರೋಗ್ಯ ಇಲಾಖೆ ಏನಿದೆ ಮಾರ್ಗಸೂಚಿಯಲ್ಲಿ..?

*ಎಲ್ಲಾ ಕಡೆ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ.

*ಈ ಬಾರಿಯ ಜಂಬೂಸವಾರಿ ಮೆರವಣಿಗೆ ದಿನ ಅರಮನೆ ಆವರಣದಲ್ಲಿ ಕೇವಲ 300 ಮಂದಿ ಮಾತ್ರ ಭಾಗಿಯಾಗಲು ಅವಕಾಶ.

*ಅಕ್ಟೋಬರ್ 17 ರಂದು ಚಾಮಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ 200 ಮಂದಿಯಷ್ಟೇ ಭಾಗಿಯಾಗಲು.

*ಅಕ್ಟೋಬರ್ 17 ರಿಂದ 24 ರ ತನಕ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇವಲ 50 ಮಂದಿಗಷ್ಟೇ ಭಾಗಿಯಾಗಲು ಅವಕಾಶ.

*ಅಕ್ಟೋಬರ್ 26 ರಂದು ನಡೆಯುವ ಜಂಬೂಸವಾರಿ ಮೆರವಣಿಗೆ ದಿನ ಅರಮನೆ ಆವರಣದಲ್ಲಿ ಕೇವಲ 300 ಮಂದಿ ಮಾತ್ರ ಭಾಗಿಯಾಗಲು ಅವಕಾಶ.

*ಅಕ್ಟೋಬರ್ 17 ರಿಂದ 26 ವರೆಗೆ ಸಂಜೆ ಸಮಯದಲ್ಲಿ ನಡೆಯುವ ವಿದ್ಯುತ್ ದೀಪಲಂಕಾರದ ವೀಕ್ಷಣೆ ವೇಳೆ ಹೆಚ್ಚಿನ ಜನಸಂದಣಿ ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು.

- Advertisement -
spot_img

Latest News

error: Content is protected !!