Friday, June 5, 2026
Homeತಾಜಾ ಸುದ್ದಿ15 ಲಕ್ಷಕ್ಕೂ ಅಧಿಕ ಮೌಲ್ಯದ ಪಾರಿವಾಳ ಕದ್ದವನನ್ನು ಕೊನೆಗೂ ಬಂಧಿಸಿದ ಪೊಲೀಸರು

15 ಲಕ್ಷಕ್ಕೂ ಅಧಿಕ ಮೌಲ್ಯದ ಪಾರಿವಾಳ ಕದ್ದವನನ್ನು ಕೊನೆಗೂ ಬಂಧಿಸಿದ ಪೊಲೀಸರು

- Advertisement -
- Advertisement -

ಭಟ್ಕಳ: 15 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಒಟ್ಟು 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಪನ್ನೀರ್ ಸೆಲ್ವಂ ಬಂಧಿತ ಆರೋಪಿಯಾಗಿದ್ದು, ಈತ ಅಕ್ಟೋಬರ್ 5ರಂದು ಭಟ್ಕಳದ ಆಜಾದ್ ನಗರದಲ್ಲಿರುವ ಪಾರಿವಾಳ ಸಾಕಾಣಿಕೆ ಕೇಂದ್ರ ದಿಂದ 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದ.

ಪಾರಿವಾಳ ಸಾಕಾಣಿಕೆ ಕೇಂದ್ರದ ಮಾಲೀಕ ಅಫ್ಜಲ್ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ 18 ಪಾರಿವಾಳಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಏಳು ಪಾರಿವಾಳಕ್ಕಾಗಿ ವಿಚಾರಣೆ ನಡೆಸಿದ್ದಾರೆ.

- Advertisement -

Latest News

error: Content is protected !!