Friday, June 5, 2026
Homeಅಪರಾಧರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ; ದೂರು ದಾಖಲು

ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ; ದೂರು ದಾಖಲು

- Advertisement -
- Advertisement -

ಮಂಗಳೂರು: ನಗರದ ರಿಕ್ಷಾ ಚಾಲಕರೊಬ್ಬರಿಗೆ ಪಣಂಬೂರು ಸ್ಥಳೀಯ ರಿಕ್ಷಾ ಚಾಲಕರು ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ. 

ಹಲ್ಲೆಗೊಳಗಾದ ರಿಕ್ಷಾ ಚಾಲಕನನ್ನು ಮುಹಮ್ಮದ್ ಅರಾಫತ್ ಎಂದು ತಿಳಿದು ಬಂದಿದೆ.

ಅರಾಫತ್ ಅವರು ಮಂಗಳೂರು ನಗರದ ರಿಕ್ಷಾ ಚಾಲಕರಾಗಿದ್ದು ಪ್ರಯಾಣಿಕರೊಬ್ಬರನ್ನು ಪಣಂಬೂರು ಬೀಚ್ ಬಳಿ ಬಿಟ್ಟು ಬಳಿಕ ಅಲ್ಲಿನ ರಿಕ್ಷಾ ಸ್ಟಾಂಡ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದರು ಎನ್ನಲಾಗಿದೆ ಈ ವೇಳೆ ಅಲ್ಲಿನ ಸ್ಥಳೀಯ ರಿಕ್ಷಾ ಚಾಲಕರು ಇದನ್ನು ಆಕ್ಷೇಪಿಸಿದ್ದಾರೆ ಅಲ್ಲದೆ ಮಾತಿಗೆ ಮಾತು ಬೆಳೆದು ಸ್ಥಳೀಯ ರಿಕ್ಷಾ ಚಾಲಕರು ಅರಾಫತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

- Advertisement -

Latest News

error: Content is protected !!