Monday, May 20, 2024
Homeತಾಜಾ ಸುದ್ದಿಸಿಬಿಐ ತನಿಖೆ ಯಾಕೆ?; ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

ಸಿಬಿಐ ತನಿಖೆ ಯಾಕೆ?; ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

spot_img
- Advertisement -
- Advertisement -

ಮೈಸೂರು: ಹಾಸನದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮಾಡುತ್ತಿದ್ದು, ನಮ್ಮ ಪೊಲೀಸರ ಬಗ್ಗೆ ನಂಬಿಕೆ‌ಯಿದೆ. ನಿಷ್ಪಕ್ಷಪಾತ ತನಿಖೆ ಮಾಡಿ ವರದಿ ಕೊಡುತ್ತಾರೆ‌. ಈ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. .

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐ ಗೆ ಕರಪ್ಶನ್ ಬ್ಯೂರ್ ಆಫ್ ಇನ್ವೇಸ್ಟಿಗೇಶನ್ ಎನ್ನುತ್ತಿದ್ದರು. ಚೋರ್ ಬಚಾವ್ ಸಂಸ್ಥೆ ಎಂದು ದೇವೇಗೌಡರು ಹೇಳಿದ್ದರು. ಈಗ ನೋಡಿದರೆ ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ, ಇದರ ಅರ್ಥ ಏನು? ಸರಿಯಾದ ದಾರಿಯಲ್ಲಿ ತನಿಖೆ ನಡೆಯುತ್ತದೆ ಎಂಬ ನಂಬಿಕೆ ಇದೆ. ನಾನು ಯಾವತ್ತು ಪೊಲೀಸರಿಗೆ ಕಾನೂನಿನ‌ ವಿರುದ್ಧವಾಗಿ ತನಿಖೆ ಮಾಡಿ ಅಂಥ ಹೇಳುವುದಿಲ್ಲ. ಎಸ್ಐಟಿ ಮೇಲೆ‌ ನಂಬಿಕೆ‌ ಇಡಬೇಕು. ನಮ್ಮ ಪೊಲೀಸ್ ಮೇಲೆ ಅವರಿಗೆ ನಂಬಿಕೆ ಇಲ್ವಾ ಎಂದು,’ ಪ್ರಶ್ನಿಸಿದರು.

ಪ್ರಕರಣದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ, ನನ್ನ ಹಸ್ತಕ್ಷೇಪ ಕೂಡ ಇಲ್ಲ. ಪೊಲೀಸರ ಮೇಲೆ ವಿಶ್ವಾಸ ಇದೆ. ಸತ್ಯ ಸತ್ಯಾತೆ ಹೊರಗೆ ಬರುತ್ತದೆ. ಪ್ರಕರಣಕ್ಕೆ ಅಂತರಾಷ್ಟ್ರೀಯ ಸಂಕರ್ಪ ಇದೆ ಎಂಬುದೆಲ್ಲಾ ನಿಜವಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

- Advertisement -
spot_img

Latest News

error: Content is protected !!