Monday, June 8, 2026
Homeಅಪರಾಧವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿ

ವಿಡಿಯೋ ಕರೆ ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿ

- Advertisement -
- Advertisement -

ಉಡುಪಿ: ಯುವತಿಯೋರ್ವಳು ವಿಡಿಯೋ ಕಾಲ್‌ ಅನ್ನು ರೆಕಾರ್ಡ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಹಂತಹಂತವಾಗಿ ಲಕ್ಷಾಂತರ ರೂ.ಗಳನ್ನು ವಸೂಲು ಮಾಡಿಕೊಂಡ ಘಟನೆ ನಡೆದಿದೆ.

ಘಟನೆಯ ವಿವರ: ಸಂತೆಕಟ್ಟೆಯ ಅಸ್ಟರ್‌ ಅವರಿಗೆ ಡೇಟಿಂಗ್‌ ಆ್ಯಪ್‌ನಲ್ಲಿ ಸಾಚಿ ಜೈನ್‌ ಎಂಬಾಕೆಯ ಪರಿಚಯವಾಗಿತ್ತು. ಆ ಬಳಿಕ ಆಕೆಯು ವಾಟ್ಸಾಪ್‌ನಲ್ಲಿ ಅಸ್ಟರ್‌ ಅವರೊಂದಿಗೆ ಚಾಟಿಂಗ್‌ ಮತ್ತು ವಿಡಿಯೋ ಕಾಲ್‌ ನಡೆಸುತ್ತಿದ್ದರು. ಈ ವಿಡಿಯೋ ಕಾಲ್‌ ಅನ್ನು ರೆಕಾರ್ಡ್‌ ಮಾಡಿ ಕೆಲವು ದಿನಗಳ ಬಳಿಕ ಅಸ್ಟರ್‌ ಅವರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಅಸ್ಟರ್‌ ಅವರು ಆಕೆ ತಿಳಿಸಿದ ಬ್ಯಾಂಕ್‌ ಖಾತೆ ಹಾಗೂ ಯುಪಿಐ ಐಡಿ ಗಳಿಗೆ ಹಂತ ಹಂತವಾಗಿ 11,30,106ರೂ.ವರ್ಗಾಯಿಸಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!