Friday, June 5, 2026
Homeಕರಾವಳಿಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ

ಅಪರಿಚಿತ ವ್ಯಕ್ತಿಯಿಂದ 2.41 ಲಕ್ಷ ರೂ. ವಂಚನೆ

- Advertisement -
- Advertisement -

ಮಣಿಪಾಲ: ವ್ಯಕ್ತಿಯೊಬ್ಬ ಕೊರಿಯರ್‌ನಲ್ಲಿ ಮಾದಕ ವಸ್ತು ಇದೆ ಎಂದು ತಿಳಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ಹಣ ವಸೂಲು ಮಾಡಿದ ಘಟನೆ ನಡೆದಿದೆ.

ಘಟನೆಯ ವಿವರ: ಮಣಿಪಾಲದ ಮೋನಿಕಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತನ್ನನ್ನು ಕೊರಿಯರ್‌ ಸಂಸ್ಥೆಯ ರಾಕೇಶ್‌ ಕುಮಾರ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ “ನಿಮ್ಮ ಆಧಾರ್‌ ಕಾರ್ಡ್‌ ಐಡಿ ಹೆಸರಿನಲ್ಲಿ ಕೋರಿಯರ್‌ ಬಂದಿದ್ದು ಅದರಲ್ಲಿ ಮಾದಕ ವಸ್ತು ಮತ್ತು ಇತರ ವಸ್ತುಗಳಿದ್ದು, ಅದು ಕಸ್ಟಮ್‌ ಆಫೀಸ್‌ನಲ್ಲಿ ಸೀಜ್‌ ಆಗಿದೆ. ಇದರ ಬಗ್ಗೆ ಮುಂಬಯಿ ಕ್ರೈಂ ಬ್ರಾಂಚ್‌ ಅವರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾನೆ. ಅನಂತರ ಮೋನಿಕಾ ಅವರಿಗೆ ಸ್ಕೈಪ್‌ ಅಪ್ಲಿಕೇಷನ್‌ ಮೂಲಕ ಅಪರಿಚಿತ ವ್ಯಕ್ತಿ ವೀಡಿಯೋ ಕರೆ ಮಾಡಿ ಕ್ರೈಂ ಬ್ರಾಂಚ್‌ ಆಫೀಸರ್‌ ಎಂದು ಪರಿಚಯಿಸಿಕೊಂಡು ವಿಚಾರಣೆ ಮಾಡುವ ನೆಪದಲ್ಲಿ ಅವರನ್ನು ನಂಬಿಸಿದ್ದಾನೆ. ಬಳಿಕ ಮೋನಿಕಾ ಅವರ ಖಾತೆಯಲ್ಲಿರುವ ಹಣವನ್ನು ತಮಗೆ ವರ್ಗಾಯಿಸುವಂತೆ ತಿಳಿಸಿದ್ದು, ಅದರಂತೆ ಮೋನಿಕಾ ಅವರು ತಮ್ಮ ಖಾತೆಯಲ್ಲಿರುವ 2,41,342ರೂ.ಗಳನ್ನು ಆರ್‌ಟಿಜಿಎಸ್‌ ಮೂಲಕ ಅಪರಿಚಿತ ವ್ಯಕ್ತಿಗೆ ವರ್ಗಾಯಿಸಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!