ಬೆಂಗಳೂರು: ಕಾಮನ್ವೆಲ್ತ್ ಕ್ರೀಡಾಕೂಟ, ಏಷ್ಯನ್ ಕ್ರೀಡಾಕೂಟ ಹಾಗೂ ಪ್ಯಾರಾ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ಭಾರತಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ರಾಜ್ಯದ ಕ್ರೀಡಾಪಟುಗಳಿಗೆ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜಪಾನ್ ನಲ್ಲಿ ನಡೆದ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್, ಅಥ್ಲೆಟಿಕ್ಸ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳ್ಳನ್ನು ಗೆದ್ದ ಪೂವಮ್ಮ ಎಂ.ಆರ್., ಗಾಲ್ಫ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದ ಪ್ರಣವಿ ಊರ್ಸ್ ಹಾಗೂ ಹಾಕಿಯಲ್ಲಿ ಚಿನ್ನದ ಪದಕ ಗೆದ್ದ ಮೊಹಿತ್ ಎಚ್.ಎಸ್. ಅವರ ಸಾಧನೆಯನ್ನು ರಾಜ್ಯಪಾಲರು ಶ್ಲಾಘಿಸಿದ್ದಾರೆ.
ಬೆಳ್ಳಿ ಪದಕ ವಿಜೇತರಾದ ಶೂಟಿಂಗ್ನ ತಿಲೋತ್ತಮಾ ಸೇನ್, ಗಾಲ್ಫ್ ನ ಅದಿತಿ ಅಶೋಕ್ ಅವರ ಸಾಧನೆಗಳನ್ನೂ ಅಭಿನಂದಿಸಿರುವ ಸುಧಾ ಯಾದವ್, ಕಂಚಿನ ಪದಕ ವಿಜೇತರಾದ ಬ್ಯಾಡ್ಮಿಂಟನ್ನ ಆಯುಷ್ ಶೆಟ್ಟಿ ಹಾಗೂ ಅಥ್ಲೆಟಿಕ್ಸ್ನ ಸ್ನೇಹಾ ಎಸ್.ಎಸ್. ಅವರ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.
ಸ್ಕಾಟ್ ಲ್ಯಾಂಡ್ ನಲ್ಲಿ ನಡೆದ 23ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಶಿಲ್ಪಾ ಕೆ.ಎಸ್. ಅವರ ಸಾಧನೆಯನ್ನೂ ರಾಜ್ಯಪಾಲರು ಅಭಿನಂದಿಸಿದ್ದಾರೆ.
ಜಪಾನ್ ನಲ್ಲಿ ನಡೆದ 5ನೇ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಪಟು ಸೌಮ್ಯ, ಬೆಳ್ಳಿ ಪದಕ ಗೆದ್ದ ರಾಧಾ ವೆಂಕಟೇಶ್ ಹಾಗೂ ಕಂಚಿನ ಪದಕ ವಿಜೇತರಾದ ಶರತ್ ಮಕನಹಳ್ಳಿ ಶಂಕರಪ್ಪ (ಪ್ಯಾರಾ ಅಥ್ಲೆಟಿಕ್ಸ್), ಸ್ವಾತಿಕ್ ಪಾಟೀಲ್, ತೇಜಸ್ ನಂದಕುಮಾರ್ ಮತ್ತು ನಿರಂಜನ್ ಮುಕುಂದನ್ (ಪ್ಯಾರಾ ಈಜು), ಪಲ್ಲವಿ ಕಳುವೆಹಳ್ಳಿ ಮಂಜುನಾಥ (ಪ್ಯಾರಾ ಬ್ಯಾಡ್ಮಿಂಟನ್) ಅವರ ಸಾಧನೆಗಳನ್ನು ರಾಜ್ಯಪಾಲರು ಅಭಿನಂದಿಸಿದ್ದಾರೆ.


