Monday, May 20, 2024
Homeಕರಾವಳಿಮಂಗಳೂರಿನಲ್ಲಿ ನಾಳೆಯಿಂದ ‘ಚಾಕೋಲೇಟ್ ಸ್ಟ್ರೀಟ್ 2024’

ಮಂಗಳೂರಿನಲ್ಲಿ ನಾಳೆಯಿಂದ ‘ಚಾಕೋಲೇಟ್ ಸ್ಟ್ರೀಟ್ 2024’

spot_img
- Advertisement -
- Advertisement -

ಮಂಗಳೂರು: ಮೇ 11 ಮತ್ತು 12ರಂದು ನಗರದ ಪಾಂಡೇಶ್ವರದ ಫೀಜಾ ಬೈ ನೆಕ್ಸಸ್‌ ಮಾಲ್‌ನ ಮೂರನೇ ಮಹಡಿಯಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎನ್‌ಐಸಿಒ) ವತಿಯಿಂದ ‘ಚಾಕೋಲೇಟ್ ಸ್ಟ್ರೀಟ್ 2024’ ಅನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿದ್ಯಾರ್ಥಿ ಆಯೋಜಕ ಬ್ರಿಯಾನ್‌ ಬಾನ್ಸ್‌, ‘ ಚಾಕೋಲೇಟ್ ಸ್ಟ್ರೀಟ್‌ ಕಾರ್ಯಕ್ರಮವನ್ನು ಪ್ರತಿ ವರ್ಷ ಸ್ಥಳೀಯ ಬೇಕರಿ ಉದ್ಯಮಿಗಳು ಹಾಗೂ ಇತರ ಕಿರು ಉದ್ಯಮಿಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಹಮ್ಮಿಕೊಳ್ಳುತ್ತಿದ್ದೇವೆ. ಇದರ ಐದನೇ ಆವೃತ್ತಿಯ ಉದ್ಘಾಟನೆ ಇದೇ 11ರಂದು ಮಧ್ಯಾಹ್ನ 12ಕ್ಕೆ ನೆರವೇರಲಿದೆ. ಓಷನ್ ಪರ್ಲ್ ಹೋಟೆಲ್‌ಗಳ ಬಳಗದ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ದುರೈ ಅರುಣ್ ಪ್ರಶಾಂತ್ ಸೆಲ್ವಂ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ನಿರ್ದೇಶಕ ರೋಷನ್ ಕೋಲಾರ ಭಾಗವಹಿಸಲಿದ್ದಾರೆ,‘ ಎಂದರು.

‘ಬೆಳಿಗ್ಗೆ 10ರಿಂದ ಸಂಜೆ 7:30ರವರೆಗೆ ಕಾರ್ಯಕ್ರಮ ನಡೆಯಲಿದೆ. ಮನೆಯಲ್ಲೇ ಬೇಕರಿ ತಿನಿಸು ತಯಾರಿಸುವ 20ಕ್ಕೂ ಹೆಚ್ಚು ಮಂದಿ ಹಾಗೂ 5 ನವೋದ್ಯಮಿಗಳು ಭಾಗವಹಿಸಲಿದ್ದಾರೆ. ಪ್ರತಿಭಾ ಪ್ರದರ್ಶನಕ್ಕೂ ಸ್ಥಳೀಯರಿಗೆ ವೇದಿಕೆ ಕಲ್ಪಿಸಲಿದ್ದೇವೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಆಯೋಜಕರಾದ ಮಾಳವಿಕಾ ನಾಯರ್, ಅನಿಷಾ ನಿಶಾಂತ್‌ ಹಾಗೂ ಅಮೇಯ ದಾಸ್‌ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!