Wednesday, May 8, 2024
Homeತಾಜಾ ಸುದ್ದಿಜೈಲಿನಲ್ಲಿ ರಾಗಿಣಿ- ಸಂಜನಾ ನಾಯಿ- ನರಿಯಂತೆ ಕಚ್ಚಾಡೋದಕ್ಕೆ ಕಾರಣ ಏನ್ ಗೊತ್ತಾ?

ಜೈಲಿನಲ್ಲಿ ರಾಗಿಣಿ- ಸಂಜನಾ ನಾಯಿ- ನರಿಯಂತೆ ಕಚ್ಚಾಡೋದಕ್ಕೆ ಕಾರಣ ಏನ್ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ರಾಗಿಣಿ ಹಾಗೂ ಸಂಜನಾ ಪರಪ್ಪನ ಅಗ್ರಹಾರದಿಂದ ಒಮ್ಮೆ ನಮಗೆ ಮುಕ್ತಿ ಸಿಗಲಿ ಅಂತಾ ದೇವರನ್ನು ಪ್ರಾರ್ಥಿಸುತ್ತಿದ್ರೆ, ಇತ್ತ ಜೈಲು ಸಿಬ್ಬಂದಿ ಕೂಡ ಒಮ್ಮೆ ಇಬ್ಬರಿಗೂ ಬೇಲ್ ಸಿಗಲಿ ಅಂತಾ ಬೇಡಿಕೊಳ್ಳುತ್ತಿದ್ದಾರೆ. ಅರೇ ! ಜೈಲು ಸಿಬ್ಬಂದಿ ಯಾಕೆ ಪ್ರಾರ್ಥಿಸುತ್ತಿದ್ದಾರೆ ಅನ್ಕೊಂಡ್ರಾ? ಅದಕ್ಕೆ ಕಾರಣ ರಾಗಿಣಿ ಹಾಗೂ ಸಂಜನಾ ನಡುವಿನ ಕಿತ್ತಾಟ.


ಹೌದು.. ರಾಗಿಣಿ ಮತ್ತು ಸಂಜನಾರ ದಿನನಿತ್ಯದ ಕಿತ್ತಾಟದಿಂದ ಜೈಲು ಸಿಬ್ಬಂದಿಗೆ ಮತ್ತು ಇತರೆ ಕೈದಿಗಳಿಗೆ ತಲೆನೋವು ಶುರುವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ನಶೆರಾಣಿಯರ ಜಗಳಕ್ಕೆ ಜೈಲಿಗೆ ಜೈಲೇ ಕಂಗಾಲಾಗಿ ಹೋಗಿದೆಯಂತೆ.


ದಿನ ಬೆಳಗಾದ್ರೆ ಇಬ್ಬರ ಕಿತ್ತಾಟ ಆರಂಭವಾಗುತ್ತಂತೆ. ಚಿಕ್ಕ ಮಕ್ಕಳಂತೆ ಸಣ್ಣ ಪುಟ್ಟ ವಿಚಾರಗಳಿಗೆ ಇಬ್ಬರೂ ನಾಯಿ- ನರಿಗಳಂತೆ ಕಿತ್ತಾಡುತ್ತಾ, ಒಬ್ಬರ ಮೇಲೆ ಮತ್ತೊಬ್ಬರು ಸಾಲು ಸಾಲು ಆರೋಪ ಮಾಡ್ತಿದ್ದಾರಂತೆ. ಇದರಿಂದ ಜೈಲು ಸಿಬ್ಬಂದಿಯ ನೆಮ್ಮದಿ ಹಾಳಾಗಿದೆ ಜೊತೆಗೆ ಇತರೆ ಕೈದಿಗಳಿಗೂ ಸಿಕ್ಕಾಪಟ್ಟೆ ತಲೆಬಿಸಿಯಾಗಿದ್ದು ಇಬ್ಬರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ ಅಂತಾ ಜೈಲಿನಲ್ಲಿರುವ ಇತರರು ಚಡಪಡಿಸುತ್ತಿದ್ದಾರಂತೆ.


ಆರಂಭದಲ್ಲಿ ನಟಿಯರೆಂದು ಗೌರವಿಸಿದ್ದ ಸಿಬ್ಬಂದಿ, ಕೈದಿಗಳು ಇದೀಗ ಯಪ್ಪಾ ರಾಗಿಣಿನಾ ಮತ್ತು ಸಂಜನಾನಾ ಸಹವಾಸ ಬೇಡಪ್ಪಾ ಅಂತಿದ್ದಾರಂತೆ. ಇನ್ನು ನಿನ್ನೆವರೆಗೂ ಒಂದೇ ಸೆಲ್ನಲ್ಲಿದ್ದ ನಟಿಯರ ಪೈಕಿ ರಾಗಿಣಿಗೆ ಪುಸ್ತಕ ಓದೋದು, ಟಿವಿ ನೋಡೋದು ದಿನ ನಿತ್ಯದ ಚಟುವಟಿಕೆಯಾದರೆ, ಬೆಳಗ್ಗೆ ಎದ್ದು ಯೋಗ ಮಾಡೋದು ಸಂಜನಾ ಗಲ್ರಾನಿ ದಿನಚರಿ. ಜೊತೆಗೆ, ಸಂಜನಾ ಜೈಲಲ್ಲಿರೋ ಪುಟ್ಟ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ, ಸಂಜನಾ ಬೆಳ್ಳಂಬೆಳಗ್ಗೆ ಸೆಲ್ನ ಲೈಟ್ ಹಾಕಿ ಯೋಗ ಮಾಡ್ತಾಳೆ ಅಂತಾ ತುಪ್ಪದ ಹುಡುಗಿಗೆ ಸಿಟ್ಟು. ನನ್ನನ್ನು ನೆಮ್ಮದಿಯಾಗಿ ಮಲಗೋಕೆ ಬಿಡ್ತಿಲ್ಲ ಅಂತಾ ಜೈಲರ್ ಮುಂದೆ ಕಂಪ್ಲೇಂಟ್ ಹೇಳಿದ್ದಾಳೆ.


ಇತ್ತ, ರಾಗಿಣಿ ರಾತ್ರಿಯೆಲ್ಲಾ ಲೈಟ್ ಹಾಕಿರ್ತಾಳೆ ಅಂತಾ ಸಂಜನಾ ದೂರುತ್ತಾಳಂತೆ. ಮಲಗೋದು ಬಿಟ್ಟು ಪುಸ್ತಕ ಓದಿಕೊಂಡು ಕಿರಿಕಿರಿ ಮಾಡ್ತಿದ್ದಾಳೆ ಅನ್ನೋದು ಸಂಜನಾ ಕಂಪ್ಲೇಂಟ್. ಇಷ್ಟೇ ಅಲ್ಲದೆ ಸಣ್ಣಸಣ್ಣ ವಿಚಾರಗಳಿಗೂ ಕಂಪ್ಲೇಂಟ್ ಮಾಡಿ ಇಬ್ಬರೂ ಕಿತ್ತಾಡ್ತಾರಂತೆ. ಜೈಲಿಗೆ ಬರೋಕೆ ನೀನು ಕಾರಣ, ಅವನಿಂದಲೇ ನಾನು ಈ ಪರಿಸ್ಥಿತಿಗೆ ಬಂದೆ ಎಂದು ಪರಸ್ಪರ ಆರೋಪ ಮಾಡಿಕೊಂಡು ರಂಪಾಟ ಮಾಡ್ತಿದ್ದಾರಂತೆ. ಇದನ್ನೆಲ್ಲಾ ನೋಡಿ ಜೈಲು ಸಿಬ್ಬಂದಿ, ಕೈದಿಗಳು ಸುಸ್ತಾಗಿ ಹೋಗಿದ್ದು ಒಮ್ಮೆ ಇವರು ಹೋದರೆ ಸಾಕಪ್ಪಾ ಅಂತಿದ್ದಾರಂತೆ.

- Advertisement -
spot_img

Latest News

error: Content is protected !!