- Advertisement -


- Advertisement -
ಕಾಪು: ಎರಡು ರಿಕ್ಷಾಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಗಾಯಗೊಂಡು, ಕೈ ಮೂಳೆ ಮುರಿತಗೊಂದ ಘಟನೆ ನ. 27ರಂದು ಕಾಪು ಶಾಂತಿ ಗಾರ್ಡನ್ ಫ್ಲಾಟ್ ಬಳಿ ನಡೆದಿದೆ.
ಸುರತ್ಕಲ್‌ನ ಕೋಡಿಕೆರೆಯಲ್ಲಿರುವ ತಾಯಿ ಮನೆಯಿಂದ ಮೇಘಾ ಅವರು ಮಗ ಕಿಯಾನ್ ಅಂಚನ್ ಹಾಗೂ ಅತ್ತೆ ಲಕ್ಷ್ಮಿ ಅಂಚನ್ ಅವರೊಂದಿಗೆ ಕಾಪು ಪಡು ಗ್ರಾಮದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಎರಡು ರಿಕ್ಷಾಗಳ ನಡುವೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಲಕ್ಷ್ಮಿ ಅಂಚನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


