- Advertisement -


- Advertisement -
ಮಂಗಳೂರು: ಮೊಬೈಲ್ ಫೋನ್ ಹ್ಯಾಕ್ ಮಾಡಿ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 1.27 ಲಕ್ಷ ರೂ. ವರ್ಗಾಯಿಸಿ ಆನ್ಲೈನ್ ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
36 ವರ್ಷದ ವ್ಯಕ್ತಿಯೊಬ್ಬರು ನ.6ರಂದು ರಾತ್ರಿ 8 ಗಂಟೆ ಸುಮಾರಿಗೆ ಮೊಬೈಲ್ ಬಳಸುತ್ತಿದ್ದಾಗ ಸಾಫ್ಟ್ವೇರ್ ಅಪ್ಡೇಟ್ ಪ್ರಕ್ರಿಯೆ ಆರಂಭವಾಗಿತ್ತು. ಇದರಿಂದ ಅನುಮಾನಗೊಂಡ ಅವರು ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಆದರೆ ಬಳಿಕ ಮೊಬೈಲ್ ತನ್ನಿಂದ ತಾನೇ ಆನ್ ಆಗಿದ್ದರಿಂದ ಹ್ಯಾಕ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದರು.
ನ.16ರಂದು ಬ್ಯಾಂಕ್ ವಹಿವಾಟುಗಳ ವಿವರ ಪರಿಶೀಲಿಸಿದಾಗ ನ.6ರಂದೇ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 1,27,700 ರೂ. ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
- Advertisement -


