Monday, May 20, 2024
Homeತಾಜಾ ಸುದ್ದಿಹೆಚ್ ಡಿ ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ಮತ್ತೆ ಮುಂದೂಡಿಕೆ; ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

ಹೆಚ್ ಡಿ ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ಮತ್ತೆ ಮುಂದೂಡಿಕೆ; ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ

spot_img
- Advertisement -
- Advertisement -

ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಿತು. ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ಸೋಮವಾರದ ಬೆಳಿಗ್ಗೆ 11.30ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ಸದ್ಯಕ್ಕೆ ರೇವಣ್ಣಗೆ ಜೈಲೇ ಗತಿಯಾದಂತೆ ಆಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಗೊಂಡಿತು.  ವಿಚಾರಣೆ ಆರಂಭವಾಗುತ್ತಿದ್ದಂತೆ, ಹೆಚ್.ಡಿ ರೇವಣ್ಣಗೆ ಸದ್ಯಕ್ಕೆ ಜಾಮೀನು ನೀಡದಂತೆ ಎಸ್‌ಐಟಿ ಪರ ಎಸ್ ಪಿಪಿ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಕೋರ್ಟ್ ಮುಂದೆ ಎಸ್‌ಐಟಿಯ ಎಸ್ ಪಿಪಿ ಜಾಯ್ನಾ ಕೋಥಾರಿ ಅವರು ವಾದ ಮಂಡಿಸಿ, ಜಾಮೀನು ಅರ್ಜಿಗೆ ನಾವು ಆಕ್ಷೇಪಣೆ ಸಲ್ಲಿಸುತ್ತಿರುವುದರ ಹಿಂದೆ ವಿಳಂಪದ ಉದ್ದೇಶವಿಲ್ಲ. ನಮ್ಮ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು ಎಂಬುದಾಗಿ ಕೋರಿದರು.

ಈ ವೇಳೆ ನ್ಯಾಯಪೀಠವು ಜಾಮೀನು ಅರ್ಜಿ ವಿಚಾರಣೆಗೆ ಕಾಲಾವಕಾಶ ನೀಡುವುದಿಲ್ಲ. ಬೇರೆ ಪ್ರಕರಣಗಳಲ್ಲಿ ನಾವು ಕಾಲಾವಕಾಶ ನೀಡಿಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ ಎಂಬುದಾಗಿ ಸ್ಪಷ್ಟ ಪಡಿಸಿತು.ಈ ಬಳಿಕ ಹೆಚ್.ಡಿ ರೇವಣ್ಣ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ವಾದಿಸುತ್ತಾ, ಜಾಮೀನು ಅರ್ಜಿ ಊರ್ಜಿತವೆಂಬ ನನ್ನ ವಾದದ ಬಗ್ಗೆ ತಕರಾರು ತೆಗೆದಿದ್ದಾರೆ. ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ಎಂದಿಗೂ ತಪ್ಪು ಮಾಹಿತಿ ನೀಡಿಲ್ಲ. 2023ರ ತಿಸ್ತಾ ಸೆಟಲ್ ವಾರ್ಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿದೆ. ನಿರಂಜರ್ ಸಿಂಗ್ ಕೇಸಲ್ಲೂ ಜಾಮೀನು ಅರ್ಜಿ ಸಲ್ಲಿಸಬಹುದೆಂಬ ತೀರ್ಪಿದೆ. 22 ತೀರ್ಪುಗಳಲ್ಲಿ ನಿರಂಜನ್ ಸಿಂಗ್ ಕೇಸ್ ಅನ್ನು ಅನುಸರಿಸಲಾಗಿದೆ ಎಂಬುದಾಗಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆ ಕಿಡ್ನ್ಯಾಪ್ ಪ್ರಕರಣ ದಾಖಲಾದ ನಂತ್ರ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಮಹಿಳೆಯ ಸುರಕ್ಷತೆಯಿಂದ ಜಾಮೀನು ನಿರಾಕರಿಸಲಾಗಿತ್ತು. ಆ ಬಳಿಕ ಅಂದೇ ಅವರು ಪತ್ತೆಯಾಗಿದ್ದರು. ಏಪ್ರಿಲ್.28ರಂದು ಹೊಳೇನರಸೀಪುರದಲ್ಲಿ ಮೊದಲ ಕೇಸ್ ದಾಖಲಾಗಿತ್ತು. ಮೇ.2ರಂದು ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು ಎಂಬುದಾಗಿ ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದಿಸಿದರು.

ಮೇ.3ರಂದು ನೋಟಿಸ್ ನೀಡಿ ಮೇ.4ರಂದು ಹಾಜರಾಗಲು ಹೇಳಿದ್ರು. ಈ ಕೇಸಲ್ಲಿ ವಿಚಾರಣೆಗೆ ಹಾಜರಾದ್ರೇ ಕಿಡ್ನ್ಯಾಪ್ ಪ್ರಕರಣದಲ್ಲಿ ಬಂಧಿಸೋ ಉದ್ದೇಶವನ್ನು ಹೊಂದಿರಲಾಗಿತ್ತು. ಆದರೇ ಹೆಚ್.ಡಿ ರೇವಣ್ಣ ವಿರುದ್ಧ ಜಾಮೀನು ನೀಡಬಹುದಾದಂತ ಆರೋಪಗಳಿವೆ. ಹೀಗಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ನೀಡುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಪೀಠಕ್ಕೆ ಹೆಚ್.ಡಿ ರೇವಣ್ಣ ಪರ ವಕೀಲ ಸಿ.ವಿ ನಾಗೇಶ್ ಕೋರಿದರು.

ವಾದ-ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಸೋಮವಾರ ಬೆಳಿಗ್ಗೆ 11.30ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ಜೈಲೇ ಗತಿಯಾಗಿದೆ.

- Advertisement -
spot_img

Latest News

error: Content is protected !!