Friday, June 5, 2026
Homeತಾಜಾ ಸುದ್ದಿಕೇರಳ; ಫೋನ್ ನಲ್ಲಿ ಮಾತನಾಡುತ್ತಾ ಕಣಗಿಲೆ ಹೂ ತಿಂದ ಯುವತಿ ಸಾವು

ಕೇರಳ; ಫೋನ್ ನಲ್ಲಿ ಮಾತನಾಡುತ್ತಾ ಕಣಗಿಲೆ ಹೂ ತಿಂದ ಯುವತಿ ಸಾವು

- Advertisement -
- Advertisement -

ಕೇರಳ; ಫೋನ್ ನಲ್ಲಿ ಮಾತನಾಡುತ್ತಾ ಕಣಗಿಲೆ ಹೂ ತಿಂದ ಯುವತಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಸೂರ್ಯ ಸುರೇಂದ್ರನ್ ಮೃತ ಯುವತಿ.

ಸೂರ್ಯ ಸುರೇಂದ್ರನ್ ವೃತ್ತಿಯಲ್ಲಿ ನರ್ಸ್ ಆಗಿದ್ದು ಲಂಡನ್ ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕುಸಿದು ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆತಂದರೂ ಆಕೆಯ ಜೀವ ಉಳಿಸಲಾಗಲಿಲ್ಲ. ಆರಂಭದಲ್ಲಿ ಆಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಅಂದುಕೊಳ್ಳಲಾಗಿತ್ತು. ಆದರೆ ಆಕೆಗೆ ಚಿಕಿತ್ಸೆ ನೀಡುವ ಸಂದರ್ಭ ಆಸ್ಪತ್ರೆಯ ವೈದ್ಯರಲ್ಲಿ ತಾನು ಫೋನ್ ನಲ್ಲಿ ಮಾತನಾಡುವ ವೇಳೆ ಅರಿವಿಲ್ಲದೆ ಅರಳಿ ಹೂ ಅನ್ನು ತಿಂದಿದ್ದೆನೆ ಎಂದಿದ್ದಾಳೆ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಹೋಗುವ ವೇಳೆ ನನಗೆ ನಿರಂತರ ವಾಂತಿಯಾಗಿದೆ ಎಂದು ಮಾಹಿತಿ ನೀಡಿದ್ದಾಳೆ .

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅರಳಿ ಹೂವು ಮತ್ತು ಎಲೆ ತಿಂದದ್ದೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮನೆಯವರೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ, ಅವಳು ಉದ್ದೇಶಪೂರ್ವಕವಾಗಿ ಅರಳಿ ಹೂವನ್ನು ಕಿತ್ತು ಸೇವಿಸಿದಳು ಎಂದು ಅವರು ಹೇಳಿದ್ದಾರೆ. “ತಕ್ಷಣ ಅವಳು ತಪ್ಪನ್ನು ಅರಿತು ಅದನ್ನು ಉಗುಳಿದಳು, ಆದರೆ ಎಲೆಯ ರಸದ ಕೆಲವು ಹನಿಗಳು ಒಳಗೆ ಹೋಗಿವೆ” ಎಂದು ಅಧಿಕಾರಿ ಹೇಳಿದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದೆ ಎಂದಿದ್ದಾರೆ. ಆದರೆ ಆಕೆಯ ಹೊಟ್ಟೆಯಲ್ಲಿ ಹೂವು ಅಥವಾ ಎಲೆಯ ಅವಶೇಷಗಳು ಕಂಡುಬಂದಿಲ್ಲ. ಈ ಬಗ್ಗೆ ಸವಿವರವಾದ ಮಾಹಿತಿ ತಿಳಿದು ಬರಬೇಕಷ್ಟೆ.

- Advertisement -

Latest News

error: Content is protected !!