Friday, May 10, 2024
Homeತಾಜಾ ಸುದ್ದಿಕೆ ಎಸ್ ಆರ್ ಟಿಸಿಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

ಕೆ ಎಸ್ ಆರ್ ಟಿಸಿಯಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

spot_img
- Advertisement -
- Advertisement -

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಕೋವಿಡ್-19ರ ಹಿನ್ನಲೆಯಲ್ಲಿ ನಿಗಮದ ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ ಒದಗಿಸಿದ್ದ ಟಿಕೆಟ್ ರಿಯಾಯಿತಿ ಸೌಲಭ್ಯವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದೀಗ ಪ್ರಕರಣಗಳು ಕಡಿಮೆಗೊಂಡ ಹಿನ್ನಲೆಯಲ್ಲಿ, ಹಿರಿಯ ನಾಗರೀಕರಿಗೆ ಟಿಕೆಟ್ ರಿಯಾಯಿತಿ ಹಾಗೂ ಪಾಸು ದರಗಳಲ್ಲಿನ ರಿಯಾಯಿತಿ ಸೌಲಭವನ್ನು ಮತ್ತೆ ಮುಂದುವರೆಸಿದೆ. ಈ ಮೂಲಕ ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಪ್ರಸ್ತುತ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿರುವುದರಿಂದ ಹಾಗೂ ಹಿರಿಯ ನಾಗರಿಕರು ಟಿಕೆಟ್ ರಿಯಾಯಿತಿ ಸೌಲಭ್ಯವನ್ನು ಮರು ಒದಗಿಸುವಂತೆ ಮನವಿಗಳನ್ನು ಸಲ್ಲಿಸುತ್ತಿರುವುದನ್ನು ಪರಿಗಣಿಸಿ, ನಿಗಮದ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಒದಗಿಸಲಾಗಿದ್ದ ಟಿಕೆಟ್ ರಿಯಾಯಿತಿ ಹಾಗೂ ಪಾಸು ದರಗಳಲ್ಲಿನ ರಿಯಾಯಿತಿ ಸೌಲಭ್ಯವನ್ನು ನಿಯಮಾನುಸಾರ ಮುಂದುವರೆಸಲು ತೀರ್ಮಾನಿಸಲಾಗಿದೆ.

ದಿನಾಂಕ 10-12-2020ರಿಂದ ಜಾರಿಗೆ ಬರುವಂತೆ ಹಿರಿಯ ನಾಗರಿಕರ ಟಿಕೆಟ್ ರಿಯಾಯಿತಿಯನ್ನು, ಮಾಸಿಕ ಬಸ್ ಪಾಸ್ ರಿಯಾಯಿತಿಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಮುಂದಿನ ಕ್ರಮವಹಿಸಲು ಸೂಚಿಸಿದ್ದಾರೆ. ಅಲ್ಲದೇ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಅವಶ್ಯಕವಿದ್ದಲ್ಲಿ ಮಾತ್ರವೇ ಪ್ರಯಾಣಿಸುವಂತ ನಾಮಫಲಕ ಅಳವಡಿಸಲು ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!