Saturday, April 27, 2024
Homeತಾಜಾ ಸುದ್ದಿತಂದೆ ತಾಯಿಯ ಹೆಸರನ್ನು ಇಮ್ರಾನ್ ಹಶ್ಮಿ ಹಾಗೂ ಸನ್ನಿ ಲಿಯೋನ್ ಎಂದು ಬದಲಾಯಿಸಿದ ಯುವಕ

ತಂದೆ ತಾಯಿಯ ಹೆಸರನ್ನು ಇಮ್ರಾನ್ ಹಶ್ಮಿ ಹಾಗೂ ಸನ್ನಿ ಲಿಯೋನ್ ಎಂದು ಬದಲಾಯಿಸಿದ ಯುವಕ

spot_img
- Advertisement -
- Advertisement -

ಬಿಹಾರ: ಕಾಲೇಜು ಯುವಕನೊಬ್ಬ ತನ್ನ ತಂದೆ-ತಾಯಿಯ ಹೆಸರನ್ನು ಸಿನಿಮಾ ನಟಿಯರ ಹೆಸರನ್ನಾಗಿ ಬದಲಾಯಿಸಿದ್ದಾನೆ. ಹೌದು, 20 ವರ್ಷದ ದ್ವಿತೀಯ ಪದವಿ ಓದುತ್ತಿರುವ ಯುವಕ ಕುಂದನ್ ಕುಮಾರ್  ತನ್ನ ತಂದೆ-ತಾಯಿಯ ಹೆಸರನ್ನು ಇಮ್ರಾನ್ ಹಶ್ಮಿ ಮತ್ತು ಸನ್ನಿ ಲಿಯೋನ್ ಎಂದು ಬದಲಾಯಿಸಿದ್ದಾನೆ.

ಅಂದ್ಹಾಗೆ ಈತ ಬಿಹಾರದ ಮುಜಾಫರ್ ಬಳಿಯ ಧನ್ರಾಜ್ ಮಹ್ತೋ ಡಿಗ್ರಿ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದಾನೆ ಎನ್ನಲಾಗಿದೆ. ಈತ ತನ್ನ ತಂದೆ-ತಾಯಿಯ ಹೆಸರನ್ನು ಬಾಲಿವುಡ್ ನಟ-ನಟಿಯರಾದ ಇಮ್ರಾನ್ ಹಾಶ್ಮಿ ಮತ್ತು ಸನ್ನಿ ಲಿಯೋನ್ ಎಂದು ಬದಲಾಯಿಸಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.


ಈತ ತನ್ನ ಅಡ್ಮಿಶನ್ ಕಾರ್ಡ್​ನಲ್ಲಿ ಪೋಷಕರ ಹೆಸರು ಮತ್ತು ವಿಳಾಸ ಬದಲಾವಣೆ ಮಾಡಿದ್ದ. ಇದನ್ನು ನೋಡಿ ಭೀಮ್ ರಾವ್ ಅಂಬೇಡ್ಕರ್ ಬಿಹಾರ ಯೂನಿವರ್ಸಿಟಿ ಶಾಕ್ ಆಗಿತ್ತು. ಈತ ಮೂಲತಃ ಮೀನಾಪುರ್​ ಬ್ಲಾಕ್​ನವನು. ಆದರೆ ತನ್ನ ವಿಳಾಸವನ್ನು ಚತುರ್ಭುಜ್ ಸ್ತಾನ್ ಎಂದು ಬದಲಾಯಿಸಿದ್ದ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಯುವಕನ್ನು ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ನಡೆಯುತ್ತಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಯೂನಿವರ್ಸಿಟಿಯತ ರಿಜಿಸ್ಟ್ರಾರ್ ರಾಮ್ ಕೃಷ್ಣ ಠಾಕೂರ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!