Sunday, June 7, 2026
Homeತಾಜಾ ಸುದ್ದಿಸವಣೂರು; ಕಂಚಿಗಾರ ಕೆರೆಯ ಜಾಗದಲ್ಲಿ ನಾಮಫಲಕಕ್ಕೆ ಎಸಿ ಸೂಚನೆ.

ಸವಣೂರು; ಕಂಚಿಗಾರ ಕೆರೆಯ ಜಾಗದಲ್ಲಿ ನಾಮಫಲಕಕ್ಕೆ ಎಸಿ ಸೂಚನೆ.

- Advertisement -
- Advertisement -

ಸವಣೂರು: ಸವಣೂರು ಗ್ರಾಮದ ದೊಡ್ಡಕೆರೆ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಕಂಚಿಗಾರ ಕೆರೆ ಒತ್ತುವರಿ ಸ್ಥಳಕ್ಕೆ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಂಚಿಗಾರ ಕೆರೆ ಜಾಗ ಒತ್ತುವರಿ ಪ್ರದೇಶದಲ್ಲಿ ಸರ್ಕಾರಿ ಜಾಗದ ಕುರಿತು ನಾಮಫಲಕ ಅಳವಡಿಸುವಂತೆ ತಿಳಿಸಿದರು. ಜೊತೆಗೆ ಜಾಗ ಅತಿಕ್ರಮಿಸಿದರೆ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ಈ ಮೊದಲು ಜಾಗ ತೆರವು ಆದೇಶಕ್ಕೆ ಪ್ರತಿಯಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಸುಜಿತ್ ಕುಮಾರ್ ಶೆಟ್ಟಿ ಅವರು ಕಡಬ ತಹಶೀಲ್ದಾರ್ ಅವರಿಗೆ ಸರಕಾರಿ ಜಮೀನಿನ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲು ದಾವೆಯನ್ನು ಹೂಡಿದ್ದರು . ಅದರಂತೆ ನ್ಯಾಯಾಲಯದಿಂದ ಮೇ. 10ರಂದು ಸರಕಾರಿ ಜಮೀನಿನ ದಾಖಲೆಗಳನ್ನು ಹಾಜರುಪಡಿಸುವಂತೆ ತಹಶೀಲ್ದಾರ್ ಅವರಿಗೆ ನೋಟಿಸ್ ಅನ್ನು ನೀಡಲಾಗಿತ್ತು.

- Advertisement -

Latest News

error: Content is protected !!