Sunday, June 7, 2026
Homeಕರಾವಳಿಕೆಮ್ಮಾರದಲ್ಲಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ; ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಕೆಮ್ಮಾರದಲ್ಲಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ; ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

- Advertisement -
- Advertisement -

ಅಲಂಕಾರು: ಇಲ್ಲಿನ ಕೊಯಿಲ ಗ್ರಾಮದ ಕೆಮ್ಮಾರದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯೋರ್ವಳಿಗೆ ಕಾರು ಡಿಕ್ಕಿ ಹೊಡೆದು ಬಾಲಕಿಯ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಮೇ. 30ರಂದು ಬೆಳಿಗ್ಗೆ ನಡೆದಿದೆ.


ಕೆಮ್ಮಾರ ದ.ಕ.ಜಿ.ಪ. ಶಾಲೆಯ ೨ನೇ ತರಗತಿಯ ವಿದ್ಯಾರ್ಥಿ ಕೆಮ್ಮಾರ ಬಡಮೆ ನಿವಾಸಿ ಮುನಾಝ್ ಎಂಬವರ ಪುತ್ರಿ ರಿಝಾ ಫಾತಿಮಾ ಗಾಯಗೊಂಡ ಬಾಲಕಿ.
ಮುಂಜಾನೆ ಮದ್ರಸಕ್ಕೆ ಹೋಗಿ ಬರುವಾಗ ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಸ್ಕಾರ್ಫಿಯೋ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಡಿಕ್ಕಿ ಸಂಭವಿಸಿದ ತಕ್ಷಣ ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷೆ ಸಲೀಕತ್ ಮತ್ತು ಯಾಕೂಬ್ ಎಂಬವರು ಬಾಲಕಿಯನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾರು ಚಾಲಕ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!