Thursday, May 16, 2024
Homeಇತರಕೊನೆಗೂ ಬಚಾವಾಯ್ತು ಕಂಬಿ ಮಧ್ಯೆ ಸಿಲುಕಿದ ಆನೆ

ಕೊನೆಗೂ ಬಚಾವಾಯ್ತು ಕಂಬಿ ಮಧ್ಯೆ ಸಿಲುಕಿದ ಆನೆ

spot_img
- Advertisement -
- Advertisement -

ಚಾಮರಾಜನಗರ : ಕಾಡಿನಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉುಟಳ ಇವತ್ತು ನಿನ್ನೆಯದಲ್ಲ. ಹೀಗೆ ಕಾಡಿನಿಂದ ಗ್ರಾಮದತ್ತ ನುಸಳಲು ಬಂದು ಕಾಡಾನೆಯೊಂದು ಬಂಡೀಪುರ ರಾಷ್ಟ್ರೀಯ ಉದ್ಯಾನದನ ಬಳಿ, ಅಡ್ಡಲಾಗಿ ಕಟ್ಟಿದ್ದ ಕಬ್ಬಿಣದ ಕಂಬಿಯ ಮಧ್ಯೆ ಸಿಲುಕಿ ಹಾಕಿಕೊಂಡಿತ್ತು. ಕೊನೆಗೂ  ಮೂರ್ನಾಲ್ಕು ಗಂಟೆಯ ಕಾರ್ಯಾಚರಣೆಯ ಬಳಿಕ ಆನೆಯನ್ನು ರಕ್ಷಿಸಲಾಗಿದೆ.  

ಬಂಡಿಪುರ ಹುಲಿ ರಕ್ಷಿತಾರಣ್ಯದ ಮೊಳೆಯೂರು ವಲಯಕ್ಕೆ ಸೇರಿದ ಕಾಡಂಚಿನ ಗ್ರಾಮವಾದ ಬಾವಿಕೆರೆ ಬಳಿ ಅರಣ್ಯದಿಂದ ಆನೆಗಳು ಗ್ರಾಮಗಳತ್ತ ಬರಬಾರದೆಂದು ರೈಲು ಕಂಬಿಗಳಿAದ ಸುತ್ತುಗೋಡೆ ನಿರ್ಮಿಸಲಾಗಿತ್ತು. ಆನೆಯೊಂದು ಆ ಕಂಬಿಯನ್ನು ಮುರಿಯಲು ಯತ್ನಿಸಿ, ಸಾಧ್ಯವಾಗದೇ ಕಂಬಿಯ ಕೆಳಭಾಗದಲ್ಲಿ ನುಸುಳಲು ಪ್ರಯತ್ನಿಸಿದೆ. ಆದರೆ ದೈತ್ಯ ಆನೆಯ ಹೊಟ್ಟೆಭಾಗ ಕಂಬಿಯ ಕೆಳಗೆ ಸಿಲುಕಿಕೊಂಡಿದೆ. ಈ ವೇಳೆ ಅತಿಯಾದ ನೋವಿನಿಂದ ಆನೆ ಚೀರಾಡಲು ಆರಂಭಿಸಿದೆ. ಆನೆ ಘೀಳಿಡುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೈಲ್ವೆ ಕಂಬಿಯನ್ನೇ ಕತ್ತರಿಸ ಕಂಬಿಯ ಕೆಳಗೆ ಸಿಲುಕಿದ್ದ ಆನೆಯನ್ನ ರಕ್ಷಿಸಿದ್ದಾರೆ. ಮೂರ್ನಾಲ್ಕು ಗಂಟೆಗಳ ಕಾಲ ಕಂಬಿಯ ಕೆಳಗೆ ಸಿಲುಕಿದ್ದರಿಂದ ನಿತ್ರಾಣಗೊಂಡಿದ್ದ ಆನೆ ಬಳಿಕ ಎದ್ದು ಓಡಲು ಪರದಾಡಿದೆ. ಕೊನೆಗೆ ಜನರ ಕೂಗಾಟದಿಂದ ಬೆದರಿ ಮೇಲೆದ್ದು ಅರಣ್ಯದ ಕಡೆಗೆ ಓಡಿದೆ.

- Advertisement -
spot_img

Latest News

error: Content is protected !!