Thursday, June 4, 2026
Homeಇತರದೃಶ್ಯ ಸಿನಿಮಾದಿಂದ ಪ್ರೇರಿತರಾಗಿ ಕೊಲೆ ಮಾಡಿ ಜೈಲು ಸೇರಿದ ಖತರ್ನಾಕ್ ಗಳು

ದೃಶ್ಯ ಸಿನಿಮಾದಿಂದ ಪ್ರೇರಿತರಾಗಿ ಕೊಲೆ ಮಾಡಿ ಜೈಲು ಸೇರಿದ ಖತರ್ನಾಕ್ ಗಳು

- Advertisement -
- Advertisement -

ಮೈಸೂರು ಸಿನಿಮಾದಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಾಡುವವರಿಗಿಂತ ನಮ್ಮಲ್ಲಿ ಅದರಲ್ಲಿರುವ ನೆಗೆಟೀವ್ ವಿಚಾರಗಳನ್ನು ಅಳವಡಿಸಿಕೊಳ್ಳುವವರೇ ಹೆಚ್ಚು. ಹೀಗೆ ಕನ್ನಡ ದೃಶ್ಯ ಸಿನಿಮಾ ನೋಡಿ ಅದೇ ರೀತಿ ಕೊಲೆ ಮಾಡಿ ಎಸ್ಕೇಪ್ ಆಗೋದಕ್ಕೆ ಹೋಗಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ ಆರೋಪಿಗಳು ಅಂದರ್ ಆಗಿದ್ದಾರೆ.

ಇಲ್ಲಿನ ಶಾರದ ಎಂಬ ಮಹಿಳೆಗೆ ಆಕೆಯ ಪತಿ ಪ್ರತಿದಿನ ಕುಡಿದು ಬಂದು ಆಕೆಯ ಪತಿ ಕಿರುಕುಳ ನೀಡುತ್ತಿದ್ದ. ಇದರಿಂಗೃದ ಬೇಸತ್ತ ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಜೂನ್ 23 ರಂದು ಸಾಲಿಗ್ರಾಮದ ಚುಂಚನಕಟ್ಟೆ ಮುಖ್ಯ ರಸ್ತೆ ಬಳಿ ಆನಂದನ ಮೃತ ದೇಹ ಪತ್ತೆಯಾಗಿತ್ತು. ಆದರೆ ಅಪಘಾತದಲ್ಲಿ ಮೃತಪಟ್ಟಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಸಾಲಿಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದರು.

 ಈ ವಿಚಾರವಾಗಿ ಪತ್ನಿ ಶಾರದಾಳನ್ನು ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಗಿದೆ. ಹಲವು ದಿನಗಳಿಂದ ಪ್ರಿಯಕರ ಬಾಬು ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಶಾರದ, ಪತಿಯನ್ನ ಮುಗಿಸಲು ಸ್ಕೆಚ್ ಹಾಕಿದ್ದಳು ಎನ್ನಲಾಗಿದೆ. ದೃಶ್ಯಂ ಸಿನಿಮಾ ಪ್ರೇರಣೆಯಿಂದ ಪ್ಲಾನ್ ಸಿದ್ದಪಡಿಸಿದ ಆರೋಪಿಗಳು. ಕೊಲೆ ಮಾಡಿ ಅಪಘಾತ ಎಂಬಂತೆ ಸೃಷ್ಟಿಸಲು ಹೋಗಿದ್ದರು. ಆದರೆ ಪೊಲೀಸರ ಚುರುಕು ತನಿಖೆಯಿಂದ ಆರೋಪಿಗಳು ಅಂದರ್ ಆಗಿದ್ದಾರೆ.

- Advertisement -

Latest News

error: Content is protected !!