Monday, April 29, 2024
Homeತಾಜಾ ಸುದ್ದಿ"ಕನ್ನಡ ಸಾಹಿತ್ಯ ಲೋಕದ ಭೀಷ್ಮ"ಡಾ.ಜಿ.ಎಸ್ ಅಮೂರ ಇನ್ನಿಲ್ಲ

“ಕನ್ನಡ ಸಾಹಿತ್ಯ ಲೋಕದ ಭೀಷ್ಮ”ಡಾ.ಜಿ.ಎಸ್ ಅಮೂರ ಇನ್ನಿಲ್ಲ

spot_img
- Advertisement -
- Advertisement -

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಡಾ.ಜಿ.ಎಸ್ ಅಮೂರ (95) ಅವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಜಿ.ಎಸ್.ಅಮೂರ ಇಂದು ಬೆಳಗ್ಗೆ 5 ಗಂಟೆಗೆ ಜೆ.ಪಿನಗರದ ನಿವಾಸದಲ್ಲಿ ನಿಧನರಾಗಿದ್ದಾರೆ‌. ಹಾವೇರಿ ಮೂಲದವರಾದ ಗುರುರಾಜ ಶ್ಯಾಮಾಚಾರ ಆಮೂರರು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ದಿಗ್ಗಜರಾಗಿದ್ದರು. ಧಾರವಾಡದಲ್ಲಿ ಶಿಕ್ಷಣ ಪಡೆದ ಅವರು ಔರಂಗಾಬಾದನ ಮರಾಠವಾಡಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ್ದರು.

ಇವರ ‘ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧಕ್ಕೆ ಗೌರವ ಡಾಕ್ಟರೇಟ್ ದೊರೆತಿದೆ.ಇವರು ಕನ್ನಡ ಮತ್ತು ಆಂಗ್ಲ ಭಾಷೆಯ ಮೇಲೆ ಪಾಂಡಿತ್ಯ ಹೊಂದಿದ್ದರು. ಸೀಮೋಲಂಘನ, ಭುವನದ ಭಾಗ್ಯ, ಅರ್ಥಲೋಕ ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ವಿಮರ್ಶಾ ಬರಹಗಳು, ಸಣ್ಣ ಕಥೆಗಳ ವಿಮರ್ಶ ಬರಹಗಳು ಅವರ ಸಾಹಿತ್ಯ ಶ್ರೇಷ್ಠತೆಯ ಕೊಡುಗೆಗಳಾಗಿವೆ. ಅವರ ಕೊರಡು ಕೊನರಿದಾಗ ಕೃತಿ ವಿಶಿಷ್ಟವಾದದ್ದು.

ಸಾಹಿತಿ ಅನಂತಮೂರ್ತಿ ಅವರು ಅಮೂರರನ್ನು ಕನ್ನಡ ಸಾಹಿತ್ಯ ಲೋಕದ ಭೀಷ್ಮ ಎಂದೇ ಸದಾ ಕರೆಯುತ್ತಿದ್ದರು.ಅವರಿಗೆ ನೃಪತುಂಗ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನವೇ ಅವರು ಇಹಲೋಕ ತ್ಯೆಜಿಸಿದ್ದಾರೆ.

- Advertisement -
spot_img

Latest News

error: Content is protected !!