- Advertisement -
- Advertisement -
ಮುಂಬೈ: ಕೊರೋನಾದ ಸಮಯದಲ್ಲಿ ತಮ್ಮ ಜೀವನದ ಹಂಗು ತೊರೆದು ರೋಗಿಗಳ ಜೀವ ಉಳಿಸುವ ವೈದ್ಯರನ್ನು ಕೊರೋನಾ ವಾರಿಯರ್ಸ್ ಎಂದೇ ಕರೆಯುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಮಹಿಳಾ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಹೌದು 34 ವರ್ಷದ ವೈದ್ಯನೊಬ್ಬ 44 ವರ್ಷದ ಸೋಂಕಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊರೊನಾ ಪಾಸಿಟಿವ್ ಸೋಂಕಿತೆ ಜೊತೆ ವೈದ್ಯ ಸಂಪರ್ಕ ಹೊಂದಿದ್ದ ಕಾರಣ ಆತನ ಬಂಧನ ಮಾಡಿಲ್ಲ ಎಂದು ವೈದ್ಯರು ತಿಳಿಸಿದ್ದು, ಮನೆಯಲ್ಲೇ ಹೋಂ ಕ್ವಾರಂಟೈನ್ನಲ್ಲಿರುವ ಕಾರಣ ಅದು ಮುಗಿದ ಬಳಿಕ ವಶಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
- Advertisement -