Monday, September 9, 2024
Homeತಾಜಾ ಸುದ್ದಿರಾಜ್ಯದಲ್ಲಿ ಇಂದು ಒಂದೇ ಒಂದು ದಿನ ಮಾರಾಟವಾದಂತ ಎಣ್ಣೆ ಎಷ್ಟು ಗೊತ್ತಾ.?

ರಾಜ್ಯದಲ್ಲಿ ಇಂದು ಒಂದೇ ಒಂದು ದಿನ ಮಾರಾಟವಾದಂತ ಎಣ್ಣೆ ಎಷ್ಟು ಗೊತ್ತಾ.?

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ನಡುವೆಯೂ ಇಂದಿನಿಂದ ಬೆಳಿಗ್ಗೆ 9 ಗಂಟೆಯಿಂದ ಮದ್ಯ ಮಾರಾಟ ಆರಂಭವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ವೈನ್ ಶಾಪ್, ಎಂ ಆರ್ ಪಿ ಶಾಪ್ ಮತ್ತು ಎಂ ಎಸ್ ಐ ಎಲ್ ಶಾಪ್ ಮುಂದೆ ಕ್ಯೂ ನಿಂತಿದ್ದಂತ ಎಣ್ಣೆ ಪ್ರಿಯರು, ನಿಗಧಿ ಪಡಿಸಿದ್ದಂತ ಪ್ರಮಾಣದಲ್ಲಿ ಮದ್ಯ ಖರೀದಿಸಿದ್ದರು. ಈ ಮೂಲಕ ಮದ್ಯ ಇಂದು ಒಂದೇ ದಿನ ಭರ್ಜರಿಯಾಗಿ ಮಾರಾಟವಾಗಿರುವ ಬಗ್ಗೆ ರಾಜ್ಯ ಅಬಕಾರಿ ಇಲಾಖೆಯಿಂದ ಮಾಹಿತಿ ಬಹಿರಂಗಗೊಂಡಿದೆ.

ಈ ಕುರಿತಂತೆ ರಾಜ್ಯ ಅಬಕಾರಿ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಇಂದು 3500 ವೈನ್ ಶಾಪ್, 700 ಎಂ ಆರ್ ಪಿ ಶಾಪ್ ಮತ್ತು ಎಂ ಎಸ್ ಐ ಎಲ್ ಮೂಲಕ ಎಂ ಆರ್ ಪಿ ದರದಲ್ಲಿಯೇ ಮದ್ಯವನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾರಾಟ ಮಾಡಲಾಗಿದೆ.

ದಿನಾಂಕ 04-05-2020ರಂದು ನಡೆದ ವಹಿವಾಟಿನಲ್ಲಿ ಅಂದಾಜು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿರುತ್ತದೆ. ಈ ಮಾರಾಟದ ಅಂದಾಜು ಮೌಲ್ಯ ಸುಮಾರು 45 ಕೋಟಿ ಆಗಿರುತ್ತದೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

- Advertisement -
spot_img

Latest News

error: Content is protected !!