Saturday, May 18, 2024
Homeಇತರಕೊರೊನಾ ಸೋಂಕಿತನ ಶವವನ್ನು ಬಸ್ ತಂಗುದಾಣದಲ್ಲಿಟ್ಟು ಅವಮಾನವೆಸಗಿದ ಆಸ್ಪತ್ರೆ ಸಿಬ್ಬಂದಿ

ಕೊರೊನಾ ಸೋಂಕಿತನ ಶವವನ್ನು ಬಸ್ ತಂಗುದಾಣದಲ್ಲಿಟ್ಟು ಅವಮಾನವೆಸಗಿದ ಆಸ್ಪತ್ರೆ ಸಿಬ್ಬಂದಿ

spot_img
- Advertisement -
- Advertisement -

ಹಾವೇರಿ : ಯಾವ ಸಾವು ಬೇಕಾದರೂ ಬರಲಿ ನನಗೆ ಕೊರನಾ ಸಾವು ಮಾತ್ರ ಬೇಡ ಅಂತಾ ಸದ್ಯ ಜನ ಬೇಡುಕೊಳ್ಳುವಂತಾಗಿದೆ. ಕೊರೊನಾದಿಂದ ಪ್ರಾಣ ಬಿಟ್ರೆ ಜನ ಅವರನ್ನು ಯಾವ ರೀತಿ ನೋಡ್ತಾರೆ ಅನ್ನೋದನ್ನು ನೀವೆಲ್ಲಾ ಈಗಾಗಲೇ ನೋಡಿದ್ದೀರಿ. ಇಂತಹದ್ದೇ ಅಮಾನವೀಯ ಘಟನೆ ನಡೆದಿದೆ. 

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ರಾಣೇಬೆನ್ನೂರಿನ ಸರಕಾರಿ ವೈದ್ಯಾಧಿಕಾರಿಗಳ ಯಡವಟ್ಟಿನಿಂದಾಗಿ ಆ ವೃಕ್ತಿಯ ಪಾರ್ಥೀವ ಶರೀರವನ್ನು ಆಸ್ಪತ್ರೆಯ ಮುಂಭಾಗದಲ್ಲಿರುವ ಬಸ್  ತಂಗುದಾಣದಲ್ಲೇ ಇರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯವರ  ಈ ಅಮಾನವೀಯ ನಡವಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾವನ್ನು ಲಘುವಾಗಿ ಪರಿಗಣಿಸುವ ಮಂದಿಗೆ ಇದೊಂದು ಜೀವನ ಪಾಠ.

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಬಸ್ ತಂಗುದಾಣದಲ್ಲಿ ಅವಮಾನವೆಸಗಿದ್ದಾರೆ

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಬಸ್ ತಂಗುದಾಣದಲ್ಲಿ ಇಟ್ಟು ವೈದ್ಯಾಧಿಕಾರಿಗಳು ಅವಮಾನವೆಸಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ !

Posted by Maha Xpress on Saturday, 4 July 2020

- Advertisement -
spot_img

Latest News

error: Content is protected !!