Thursday, June 4, 2026
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿ ಇಂದು 75 ಕೊರೊನಾ ಪಾಸಿಟಿವ್ ಪ್ರಕರಣ, ಮೂವರು ಕೋವಿಡ್-19 ಬಲಿ, ಉಡುಪಿಯಲ್ಲಿ ಆತಂಕ...

ದಕ್ಷಿಣಕನ್ನಡದಲ್ಲಿ ಇಂದು 75 ಕೊರೊನಾ ಪಾಸಿಟಿವ್ ಪ್ರಕರಣ, ಮೂವರು ಕೋವಿಡ್-19 ಬಲಿ, ಉಡುಪಿಯಲ್ಲಿ ಆತಂಕ ಮೂಡಿಸಿದ 18 ಪಾಸಿಟಿವ್ ಕೇಸುಗಳು

- Advertisement -
- Advertisement -

ಮಂಗಳೂರು : ನಿನ್ನೆಗೆ ಹೋಲಿಸಿದ್ರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿರೋದು ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. ನಿನ್ನೆ ಮತ್ತು ಮೊನ್ನೆ 90 ಹಾಗೂ 97  ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದವು. ಇವತ್ತು 75 ಕೊರೊನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ.

ಇನ್ನು ಕೊರೊನಾಗೆ ಜಿಲ್ಲೆಯಲ್ಲಿ ಮೂವರು ಬಲಿಯಾಗಿದ್ದಾರೆ. ಇವತ್ತು 26 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಸದ್ಯ 552 ಸಕ್ರೀಯ ಕೊರೊನಾ ಪ್ರಕರಣಗಳಿವೆ. ಉಡುಪಿಯಲ್ಲಿ ಇವತ್ತು 18  ಕೊರೊನಾ ಕೇಸುಗಳು ದಾಖಲಾಗಿವೆ. ಉಡುಪಿಯಲ್ಲಿ 170  ಸಕ್ರೀಯ ಪ್ರಕರಣಗಳಿದ್ದು, 10 ಜನ ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!