Sunday, October 18, 2026
Homeಕರಾವಳಿಮಂಗಳೂರುಗೂಗಲ್ ಮ್ಯಾಪ್ ನಂಬಿ ಕಾಡಿಗೆ ಹೋದ ಟೆಕ್ಕಿಗಳು: ಕಂದಕದಲ್ಲಿ ಸಿಲುಕಿದ ಇನೋವಾ ಕಾರು

ಗೂಗಲ್ ಮ್ಯಾಪ್ ನಂಬಿ ಕಾಡಿಗೆ ಹೋದ ಟೆಕ್ಕಿಗಳು: ಕಂದಕದಲ್ಲಿ ಸಿಲುಕಿದ ಇನೋವಾ ಕಾರು

- Advertisement -
- Advertisement -

ಬೆಂಗಳೂರು;ಗೂಗಲ್ ಮ್ಯಾಪ್ ನಂಬಿ ಹೊರಟ ಟೆಕ್ಕಿಗಳ ತಂಡವೊಂದು ದಟ್ಟ ಅಡವಿಯ ಕಂದಕದಲ್ಲಿ ಸಿಲುಕಿ ಪರದಾಡಿದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮೈಸೂರಿಗೆ ಆಗಮಿಸಿ, ಅಲ್ಲಿಂದ ತಮಿಳುನಾಡಿನ ಚೆನ್ನೈಗೆ ಹೊರಟಿದ್ದ 9 ಜನರ ತಂಡ ಚಾಮರಾಜನಗರ ಮಾರ್ಗವಾಗಿ ರಾತ್ರಿ ದಿಂಬಂ ಘಾಟ್ ಮೂಲಕ ಪ್ರಯಾಣಿಸುತ್ತಿತ್ತು.

ರಾತ್ರಿ ವೇಳೆ ಸಂಪೂರ್ಣವಾಗಿ ಗೂಗಲ್ ಮ್ಯಾಪ್ ಅನ್ನು ನಂಬಿ ಕಾರು ಚಲಾಯಿಸಿದ ಚಾಲಕ, ಮ್ಯಾಪ್ ತೋರಿಸಿದ ದಾರಿಯಲ್ಲೇ ಸಾಗಿದ್ದಾನೆ. ಪರಿಣಾಮ, ಕಾರು ನೇರವಾಗಿ ದಟ್ಟ ಕಾಡಿನ ಕಂದಕಕ್ಕೆ ಇಳಿದು ಸಿಲುಕಿಕೊಂಡಿದೆ. ಇದರಿಂದಾಗಿ ಆತಂಕಗೊಂಡ 9 ಜನರ ತಂಡ ಇಡೀ ರಾತ್ರಿ ಹಾಗೂ ಬೆಳಗಿನವರೆಗೂ ದಟ್ಟ ಕಾಡಿನಲ್ಲೇ ಕಳೆಯಬೇಕಾಯಿತು.

ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಕಂದಕಕ್ಕೆ ಸಿಲುಕಿದ್ದ ಕಾರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ರಾತ್ರಿ ವೇಳೆ ಅಪರಿಚಿತ ಹಾಗೂ ದುರ್ಗಮ ಮಾರ್ಗಗಳಲ್ಲಿ ಪ್ರಯಾಣಿಸುವಾಗ ಕೇವಲ ಜಿಪಿಎಸ್ ಅನ್ನು ಮಾತ್ರ ನಂಬದೆ ಎಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.

- Advertisement -

Latest News

error: Content is protected !!