ಮಂಗಳೂರು: ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ಸಂಸ್ಥೆಯು ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಮೂರು ದಿನಗಳ ಅಣಬೆ ಕೃಷಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು.
ಕೈದಿಗಳು ಬಿಡುಗಡೆಯ ನಂತರ ಸ್ವಾವಲಂಬಿ ಜೀವನ ನಡೆಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ಮರಳಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾಸರಗೋಡಿನ ಪಾಂಡುರಂಗ ಮತ್ತು ಅವರ ತಂಡವು ತರಬೇತಿ ನೀಡಿದ್ದು, ಅಣಬೆ ಕೃಷಿ ಮಾಡುವ ವಿಧಾನ ಹಾಗೂ ಅದರಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಒಟ್ಟು 23 ಮಂದಿ ಕೈದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿಯಲ್ಲಿ ಭಾಗವಹಿಸಿದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ಮಂಗಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂ.ಫಾ. ಸ್ಟೀಫನ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಜೈಲು ಅಧೀಕ್ಷಕ ಶರಣಬಸಪ್ಪ, ಸಹಾಯಕ ಅಧೀಕ್ಷಕ ಸಿದ್ದಪ್ಪಪಾಟೀಲ್, ಪಿಎಂಐ ಸಂಯೋಜಕ ಡೊನಾಲ್ಡ್ ಕೌಟಿನ್ಹೊ, ಕಾರ್ಯದರ್ಶಿ ಸಿಸ್ಟರ್ ಜ್ಯೋತ್ಸ್ನಾ ಎ.ಸಿ., ಸಹಾಯಕ ಸಂಯೋಜಕ ಲಾರೆನ್ಸ್ ಕ್ರಾಸ್ತಾ, ಜಂಟಿ ಕಾರ್ಯದರ್ಶಿ ಜಾನ್ ಪಾಯ್ಸ್, ಸಿಸ್ಟರ್ ಲಿಡ್ವಿನ್, ಗ್ಲಾಡಿಸ್ ಕೊಯೆಲ್ಹೊ ಹಾಗೂ ಜೈಲು ಆಪ್ತ ಸಮಾಲೋಚಕ ಡೆನಿಸ್ ಉಪಸ್ಥಿತರಿದ್ದರು.


