Saturday, May 18, 2024
Homeಇತರಕೇರಳದ ಮಾಜಿ ಬಿಷಪ್ ಮುಲಾಕ್ಕಲ್ ವಿರುದ್ಧ ಜಾಮೀನು ರಹಿತ ವಾರೆಂಟ್, ಅತ್ಯಾಚಾರಿಗೆ ಶಾಕ್ ಕೊಟ್ಟ ಕೋರ್ಟ್

ಕೇರಳದ ಮಾಜಿ ಬಿಷಪ್ ಮುಲಾಕ್ಕಲ್ ವಿರುದ್ಧ ಜಾಮೀನು ರಹಿತ ವಾರೆಂಟ್, ಅತ್ಯಾಚಾರಿಗೆ ಶಾಕ್ ಕೊಟ್ಟ ಕೋರ್ಟ್

spot_img
- Advertisement -
- Advertisement -

ಕೊಚ್ಚಿ :  ಸಾಲು ಸಾಲು ಅತ್ಯಾಚಾರ ಆರೋಪ ಎದುರಿಸುತ್ತಿರುವ ಜಲಂಧರ್ ನ ಮಾಜಿ ಬಿಷಪ್ ಫ್ರಾಂಕೋ ಮುಲಾಕ್ಕಲ್ ಜಾಮೀನು ಅರ್ಜಿಯನ್ನು ಕೊಟ್ಟಾಯಂ ನ್ಯಾಯಾಲಯ ತಿರಸ್ಕರಿಸಿ, ಬಿಷಪ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

ಇಂದು ಪ್ರಕರಣದ ವಿಚಾರಣೆಯು ಕೊಟ್ಟಾಯಂನ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯಿತು. ಆದರೆ, ಫ್ರಾಂಕೋ ವಿಚಾರಣೆಗೆ ಹಾಜರಿರಲಿಲ್ಲ. ಇದರಿಂದಾಗಿ ಮಾಜಿ ಬಿಷಪ್ ಪರ ವಕೀಲರ ವಾದವನ್ನು ಕೋರ್ಟ್ ಆಲಿಸಿತು. ಫ್ರಾಂಕೋ ಅವರು ಕೊರೊನಾ ತೀವ್ರಗೊಂಡ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ಅವರ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿವಾದ ಸಲ್ಲಿಸಿದ ದೂರುದಾರರ ಪರ ವಕೀಲರು, ಫ್ರಾಂಕೋ ಅವರು ಇರುವ ಜಲಂಧರ್ ಪ್ರದೇಶ ಕಂಟೈನ್ಮೆಂಟ್ ಝೋನ್ ಅಲ್ಲ ಎಂದು ವಾದಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯುವು, ಈ ಪ್ರಕರಣದ ವಿಚಾರಣೆಯು ಜುಲೈ 1ರಿಂದ ನಡೆಯುತ್ತಿದ್ದರೂ, ಒಂದು ಬಾರಿಯೂ ಮಾಜಿ ಬಿಷಪ್ ಕೋರ್ಟ್‍ಗೆ ಹಾಜರಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತು.

ಫ್ರಾಂಕೋ ಕಳೆದ ವರ್ಷ ಸೆಪ್ಟಂಬರ್ 21ರಂದು ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ಈ ಪ್ರಕರಣದಲ್ಲಿ 2019ರ ಅಕ್ಟೋಬರ್ 16ರಂದು ಜಾಮೀನು ಪಡೆದಿದ್ದರು. ಫ್ರಾಂಕೋ ವಿರುದ್ಧ ಕೇರಳ ಪೊಲೀಸರು 1400 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣ 2020 ಜನವರಿ 6ರಿಂದ ವಿಚಾರಣೆ ಆರಂಭಗೊಂಡಿತ್ತು. ಈ ಪ್ರಕರಣದಲ್ಲಿ ಫ್ರಾಂಕೋ ವಿರುದ್ಧ ಒಟ್ಟು 83 ಸಾಕ್ಷಿಗಳಿವೆ. ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದ ಬಳಿಕ ಫ್ರಾಂಕೋ ಅವರನ್ನು ಬಿಷಪ್ ಸ್ಥಾನದಿಂದ ಕೆಳಗಿಳಿಸಲಾಗಿತ್ತು.

ಕ್ರೈಸ್ತ ಧರ್ಮದಲ್ಲಿ ಬಿಷಪ್ ಸ್ಥಾನಕ್ಕೆ ಜನರು ಹೆಚ್ಚಿನ ಗೌರವ ನೀಡುತ್ತಾರೆ. ಆದರೆ ಫ್ರಾಂಕೋ ಅವರು ಇಂತಹ ಸ್ಥಾನದಲ್ಲಿದ್ದುಕೊಂಡು ಧರ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರ ವಿರುದ್ಧ ಸೈರೋಮಲಾಬಾರ್ ಕ್ಯಾಥೋಲಿಕ್ ಚರ್ಚ್‍ನ ಪ್ರಮುಖ ಮೂವರು ಬಿಷಪ್, 11 ಪಾದ್ರಿಗಳು ಹಾಗೂ ಹಲವು ಸನ್ಯಾಸಿಗಳು ಸಿಡಿದೆದ್ದಿದ್ದರು.

- Advertisement -
spot_img

Latest News

error: Content is protected !!