Friday, June 5, 2026
Homeಕರಾವಳಿದಕ್ಷಿಣಕನ್ನಡದಲ್ಲಿಂದು 131 ಮಂದಿಗೆ ಕೊರೊನಾ ದೃಢ, ಇಬ್ಬರು ಕೊರೊನಾಗೆ ಬಲಿ

ದಕ್ಷಿಣಕನ್ನಡದಲ್ಲಿಂದು 131 ಮಂದಿಗೆ ಕೊರೊನಾ ದೃಢ, ಇಬ್ಬರು ಕೊರೊನಾಗೆ ಬಲಿ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸದ್ಯಕ್ಕಂತೂ ಕಡಿಮೆಯಾಗುವ ಯಾವ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ. ಜಿಲ್ಲೆಯಲ್ಲಿ ಇಂದು 131 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಎರಡು ಮಂದಿಯನ್ನು ಕೊರೊನಾ ಬಲಿ ಪಡೆದುಕೊಂಡಿದೆ.

ಇನ್ನು ಸೋಂಕಿತ 131 ಮಂದಿಯಲ್ಲಿ 16 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಐಎಲ್ ಐ ಲಕ್ಷಣಗಳಿಂದ 63 ಮಂದಿಗೆ ಕೊರೊನಾ ದೃಢಪಟ್ಟಿದೆ. ಹಾಗೇ ಎಸ್ ಎ ಆರ್ ಐಯ 10 ಮಂದಿಗೆ, ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಇರುವ 4 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ. ಇನ್ನುಳಿದ 38 ಮಂದಿ ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.ಸದ್ಯ 1467 ಸಕ್ರೀಯ ಪ್ರಕರಣಗಳಿದ್ದು, 844 ಮಂದಿ ಇದುವೆರೆಗೂ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇವತ್ತು 62 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ

- Advertisement -

Latest News

error: Content is protected !!