Saturday, May 4, 2024
Homeಇತರಲಸಿಕೆ ಪಡೆಯದ ನೌಕರರಿಗೆ ಕಾದಿತ್ತು ಬಿಗ್ ಶಾಕ್...! ಅಷ್ಟಕ್ಕೂ ಆಗಿದ್ದೇನು ಗೊತ್ತಾ...?

ಲಸಿಕೆ ಪಡೆಯದ ನೌಕರರಿಗೆ ಕಾದಿತ್ತು ಬಿಗ್ ಶಾಕ್…! ಅಷ್ಟಕ್ಕೂ ಆಗಿದ್ದೇನು ಗೊತ್ತಾ…?

spot_img
- Advertisement -
- Advertisement -

ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅನೇಕ ಕಂಪನಿಗಳು, ತನ್ನ ಉದ್ಯೋಗಿಗಳಿಗೆ ಲಸಿಕೆ ನೀಡ್ತಿವೆ. ಈ ಮಧ್ಯೆ, ಡೆಲ್ಟಾ ಏರ್ ಲೈನ್ಸ್, ತನ್ನ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಉದ್ಯೋಗಿಗಳು ಲಸಿಕೆಯ ಎರಡೂ ಡೋಸ್ ತೆಗೆದುಕೊಳ್ಳುವುದನ್ನು ಕಂಪನಿ ಕಡ್ಡಾಯಗೊಳಿಸಿದೆ. ಲಸಿಕೆ ಪಡೆಯದ ನೌಕರರಿಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿದೆ.

ಉದ್ಯೋಗಿಗಳು ಲಸಿಕೆ ಹಾಕಿಸಿಕೊಳ್ಳದೆ ಹೋದ್ರೆ ಅವರಿಗೆ ತಿಂಗಳಿಗೆ 14,831 ರೂಪಾಯಿ ದಂಡ ವಿಧಿಸಲಾಗುವುದು ಎಂದು ಕಂಪನಿ ಹೇಳಿದೆ. ಇತ್ತೀಚಿನ ವಾರಗಳಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾದ ಉದ್ಯೋಗಿಗಳ್ಯಾರೂ ಕೊರೊನಾ ಲಸಿಕೆ ಹಾಕಿಕೊಂಡಿಲ್ಲ. ಕೊರೊನಾ ಚಿಕಿತ್ಸೆ ವೆಚ್ಚ ಸುಮಾರು 50 ಸಾವಿರ ಡಾಲರ್ ಎಂದು ಕಂಪನಿ ಸಿಇಒ ಹೇಳಿದ್ದಾರೆ.

ಸೆಪ್ಟೆಂಬರ್ 30 ರೊಳಗೆ ಉದ್ಯೋಗಿ ಲಸಿಕೆ ಹಾಕಿಕೊಳ್ಳದೆ ಹೋದಲ್ಲಿ ವೇತನ ನಿಲ್ಲಿಸಲಾಗುವುದು ಎಂದು ಕಂಪನಿ ಹೇಳಿದೆ. ಕಂಪನಿಯು ಸೆಪ್ಟೆಂಬರ್ 12 ರಿಂದ ಪ್ರತಿ ವಾರ ಪರೀಕ್ಷೆ ನಡೆಸಲಿದೆ. ಉದ್ಯೋಗಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ.

ಯುನೈಟೆಡ್ ಏರ್‌ಲೈನ್ಸ್ ಎಲ್ಲಾ ಉದ್ಯೋಗಿಗಳಿಗೆ ಸೆಪ್ಟೆಂಬರ್ 27 ರೊಳಗೆ ಲಸಿಕೆ ಪಡೆಯುವುದು ಕಡ್ಡಾಯ ಎಂದಿದೆ. ಸೆಪ್ಟೆಂಬರ್ 27 ರ ನಂತರ ಕಂಪನಿ ಕ್ರಮ ತೆಗೆದುಕೊಳ್ಳಲಿದೆ. ಡೆಲ್ಟಾ ಏರ್‌ಲೈನ್ಸ್ ನ ಸಿಇಒ ಪ್ರಕಾರ, ಕಂಪನಿಯ ಶೇಕಡಾ 75ರಷ್ಟು ಉದ್ಯೋಗಿಗಳು ಲಸಿಕೆ ತೆಗೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!