Friday, June 5, 2026
Homeಕರಾವಳಿಮಂಗಳೂರುಧರ್ಮಸ್ಥಳ; ಆಟವಾಡುತ್ತಾ ಮಗು ಕೆರೆಗೆ ಬಿದ್ದು ಸಾವು

ಧರ್ಮಸ್ಥಳ; ಆಟವಾಡುತ್ತಾ ಮಗು ಕೆರೆಗೆ ಬಿದ್ದು ಸಾವು

- Advertisement -
- Advertisement -

ಧರ್ಮಸ್ಥಳ; ಆಟವಾಡುತ್ತಾ ಕೆರೆ ಬಳಿಗೆ ಹೋದ ಮಗುವೊಂದು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಧರ್ಮಸ್ಥಳದ ಮುಳ್ಳಿಕಾರ್ ಎಂಬಲ್ಲಿ ನಡೆದಿದೆ.

ಮುಳ್ಳಿಕಾರು ಜಗದೀಶ್ ಎಂಬವರ 1.9 ತಿಂಗಳ ಮಗು ಪ್ರಣಿತ್ ಕುಮಾರ್ ಸಾವನ್ನಪ್ಪಿದ ಕಂದಮ್ಮ.ಜಗದೀಶ್ ಪತ್ನಿ ಪ್ರತಿದಿನ ಕೆರೆ ಬಳಿ ಬಟ್ಟೆ ತೊಳೆಯಲು ಹೋಗುವಾಗ ಮಗುವನ್ನು ಕರೆದೊಯ್ಯುತ್ತಿದ್ದರು.ನಿನ್ನೆ ಮನೆಯವರೆಲ್ಲಾ ಮನೆಯೊಳಗಿದ್ದಾಗ ಮಗು ಹೊರಗಡೆ ಆಟವಾಡುತ್ತಿತ್ತು.ಸ್ವಲ್ಪ ಹೊತ್ತಾದ ಬಳಿಕ ನೋಡಿದಾಗ ಮಗು ಅಂಗಳದಲ್ಲಿ ಇರಲಿಲ್ಲ.

ಮನೆಯವರು ಹುಡುಕಾಡಿದಾಗ ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!