Friday, May 3, 2024
Homeಇತರಸರ್ಕಾರಿ ಕಛೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೆ ಲಂಚ ಕೇಳುತ್ತಾರೆ ಇದಕ್ಕೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ:...

ಸರ್ಕಾರಿ ಕಛೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೆ ಲಂಚ ಕೇಳುತ್ತಾರೆ ಇದಕ್ಕೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ: ಎಸ್.ಅಂಗಾರ

spot_img
- Advertisement -
- Advertisement -

ಆಲಂಕಾರು: ಸರ್ಕಾರಿ ಕಛೇರಿಯಲ್ಲಿ ಸಣ್ಣ ಪುಟ್ಟ ಸೇವೆಗೂ ಅಧಿಕಾರಿಗಳು ಜನರನ್ನು ವಿನಾಃ ಕಾರಣ ನೀಡಿ ಅಲೆದಾಡಿಸುವ ಮತ್ತು ಜನ ಸಾಮನ್ಯರಿಗೆ ಸೇವೆ ನೀಡುವುದನ್ನು ಮರೆತು ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಡುವ ಬಗ್ಗೆ ಹಲವಾರು ದೂರುಗಳು ವ್ಯಕ್ತವಾಗುತ್ತಿದೆ ಈ ವಿಕಾರಿಕ್ಕೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಂತಹ ಉನ್ನತ ಅಧಿಕಾರಿಗಳನ್ನು ಗ್ರಾಮಕ್ಕೆ ಮಟ್ಟಕ್ಕೆ ಕರೆಸಿಕೊಂಡು ಜನರ ಸಮಸ್ಯೆಗೆ ಗ್ರಾಮ ಮಟ್ಟದಲ್ಲಿ ಪರಿಹಾರ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಅವರು ಕಡಬ ತಾಲೂಕು ಕೊಯಿಲ ಗ್ರಾಮದಲ್ಲಿ ತಮ್ಮ ಸ್ವಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದರು. ತಳಮಟ್ಟದ ವ್ಯಕ್ತಿಗೂ ಸೌಲಭ್ಯ ದೊರಕಬೇಕೆಂಬ ಬಿಜೆಪಿಯ ಅಂತ್ಯೋದಯ ಕಲ್ಪನೆ ಸಾಕಾರಗೊಳ್ಳುತ್ತಿದೆ, ಹೀಗಾಗಿ ತಲಮಟ್ಟದ ಕಾರ್ಯಕರ್ತನಿಗೂ ಉನ್ನತ ಹುದ್ದೆಯ ಜವಬ್ದಾರಿ ನೀಡಲಾಗುತ್ತಿದೆ.

ಸರ್ಕಾರದ ಸಾಧನೆಯನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕಾರ್ಯ ಪಕ್ಷದ ಕಾರ್ಯಕರ್ತರಿಂದ ನಡೆಯಬೇಕು. ಆ ಮೂಲಕ ತಲಮಟ್ಟದಿಂದ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸಬೇಕು. ಸಾಮೂಹಿಕ ನಿರ್ಧಾರ, ವೈಚಾರಿಕತೆ, ಆರ್ಥಿಕ ಪರಿಶುದ್ದತೆಗೆ ಪಕ್ಷದಲ್ಲಿ ಆಧ್ಯತೆ ನೀಡಲಾಗುತ್ತದೆ. ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ತ್ಯಾಗ ಮನೋಭಾವನೆಯಿಂದ ದುಡಿಯುವ ಕಾರ್ಯಕರ್ತನನ್ನು ಪಕ್ಷ ಯಾವತ್ತು ಗುರುತಿಸುತ್ತದೆ ಎಂದರು.

- Advertisement -
spot_img

Latest News

error: Content is protected !!